ವೆಟ್ರಿಮಾರನ್ ನಿರ್ದೇಶನದ ರಿಮೇಕ್ ಸಿನಿಮಾದಲ್ಲಿ ಶಿವರಾಜ್ ಕುಮಾರ್?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಹರ್ಷ ನಿರ್ದೇಶನದ ಭಜರಂಗಿ-2 ಹಾಗೂ ಆರ್ ಡಿಎಕ್ಸ್ ಹಾಗೂ ಭೈರತಿ ರಣಗಲ್ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಹರ್ಷ ನಿರ್ದೇಶನದ ಭಜರಂಗಿ-2 ಹಾಗೂ ಆರ್ ಡಿಎಕ್ಸ್ ಹಾಗೂ ಭೈರತಿ ರಣಗಲ್ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಶಿವರಾಜ್ ಕುಮಾರ್ ಅವರು ರೀಮೇಕ್ ಸಿನಿಮಾಗಳಲ್ಲಿ ನಟಿಸುವುದು ಬಿಟ್ಟು 19 ವರ್ಷಗಳಾಗಿದ್ದವು. ಸದ್ಯ
ತಮಿಳಿನಲ್ಲಿ ಧನುಷ್ ಅಭಿನಯಿಸಿ ಭಾರಿ ಹಿಟ್ ಆಗಿದ್ದ 'ಅಸುರನ್' ಸಿನಿಮಾದ ಕನ್ನಡ ರೀಮೇಕ್ ನಲ್ಲಿ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ. ಇಲ್ಲಿ ಧನುಷ್ ಅಭಿನಯಿಸಿದ್ದ 'ಅಸುರನ್' ಪಾತ್ರ ಶಿವಣ್ಣನದ್ದು. ಪಕ್ಕಾ ಹಳ್ಳಿ, ಆದರೆ ಅಷ್ಟೇ ರೌದ್ರಾವತಾರದ ಪಾತ್ರವಿದು.
ಜೇಕಬ್ ವರ್ಗೀಸ್ ನಿರ್ದೇಶನ ಮಾಡುವ ಸಾಧ್ಯತೆ ತಮಿಳು ನಿರ್ಮಾಪಕರೊಬ್ಬರು ಶಿವಣ್ಣನ ಬಳಿ ಈ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಸೂಕ್ಷ್ಮ ನಿರ್ದೇಶಕ ಜೇಕಬ್ ವರ್ಗೀಸ್ ಶಿವಣ್ಣನಿಗಾಗಿ 'ಅಸುರನ್' ಅನ್ನು ಕನ್ನಡದಲ್ಲಿ ನಿರ್ದೇಶಿಸಲಿದ್ದಾರೆ.
ಶಿವಣ್ಣ ಬಳಿ ಒಂದು ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಲಿದೆ. ತೆಲುಗಿನಲ್ಲಿ ವೆಂಕಟೇಶ್ ಅಭಿನಯಿಸುತ್ತಿದ್ದಾರೆ ವೆಟ್ರಿಮಾರನ್ ನಿರ್ದೇಶಿಸಿದ್ದ 'ಅಸುರನ್' ಸಿನಿಮಾ ತಮಿಳಿನಲ್ಲಿ ಭಾರಿ ಹಿಟ್ ಆಗಿತ್ತು.
ಜಾತಿ ವೈಷಮ್ಯದ ಕತಾ ವಸ್ತು ಒಳಗೊಂಡಿದ್ದ ಈ ಸಿನಿಮಾ, ವಕ್ಕೈ ಎಂಬ ಕಾದಂಬರಿ ಆಧರಿತವಾಗಿತ್ತು. ಇದೇ ಸಿನಿಮಾವನ್ನು ತೆಲುಗಿನಲ್ಲಿ ವೆಂಕಟೇಶ್ 'ನಾರಪ್ಪ' ಹೆಸರಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ.
ತಮಿಳಿನ 'ಅಸುರನ್' ಕನ್ನಡಕ್ಕೆ ತರ್ಜುಮೆಗೊಳಿಸಿದರೆ ಅಸುರ ಅಥವಾ ರಾಕ್ಷಸ ಎಂಬರ್ಥ ಒದಗುತ್ತದೆ. ಶಿವರಾಜ್ ಕುಮಾರ್ 'ಅಸುರ' ಹಾಗೂ 'ರಾಕ್ಷಸ' ಎರಡೂ ಹೆಸರಿನ ಸಿನಿಮಾವನ್ನು ಈಗಾಗಲೇ ಮಾಡಿದ್ದಾರೆ.
ಹಾಗಾಗಿ ಈ ಚಿತ್ರಕ್ಕೆ ಯಾವ ಹೆಸರಿಡುತ್ತಾರೆ ಎಂಬ ಕುತೂಹಲವೂ ಇದೆ. ಮತ್ತೊಂದು ಮೂಲದ ಪ್ರಕಾರ ಶಿವಣ್ಣ ಅವರು ತಮಿಳಿನ ಮತ್ತೊಂದು ಹಿಟ್ ಚಿತ್ರ 'ಖೈದಿ' ಯ ಕನ್ನಡ ಅವತರಿಣಿಕೆಯಲ್ಲೂ ನಟಿಸಲು ಒಪ್ಪಿದ್ದಾರೆ. ಆಕ್ಷನ್, ನಿಗೂಢತೆ, ಸೆಂಟಿಮೆಂಟ್ ಎಲ್ಲವೂ ಹೊಂದಿರುವ ಈ ಸಿನಿಮಾ ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


