ಮತ್ತೊಂದು ಸಿನಿಮಾಗೆ ಸಹಿ ಮಾಡಿದ 'ದಿಯಾ' ಹೀರೋ ಪೃಥ್ವಿ ಅಂಬಾರ್
ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .

ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .
ಪೃಥ್ವಿ ನಟಿಸಲಿರುವ ಹೊಸ ಚಿತ್ರಕ್ಕೆ 'for regn' (ಫಾರ್ ರಿಜಿಸ್ಟ್ರೇಷನ್) ಎಂದು ಶೀರ್ಷಿಕೆ ಇಡಲಾಗಿದೆ. ಮೇ ತಿಂಗಳಿಂದ ಇದರ ಶೂಟಿಂಗ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರೊಮ್ಯಾಂಟಿಕ್ ಕಥಾಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ.
ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಅವರಿಗೆ ಕೆಲವು ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ. ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್. ಸಂಗೀತ ನಿರ್ದೇಶನ 'For regn' ಚಿತ್ರಕ್ಕಿದೆ.
ಕನ್ನಡದ ಜೊತೆಗೆ ತುಳು ಸಿನಿಮಾಗಳಲ್ಲಿಯೂ ಪೃಥ್ವಿ ಅಭಿನಯಿಸುತ್ತಿದ್ದಾರೆ. 'ದಿಯಾ' ಸಿನಿಮಾದ ಯಶಸ್ಸಿನ ನಂತರ ಅವರಿಗೆ ಒಳ್ಳೊಳ್ಳೆಯ ಆಫರ್‌ಗಳು ಸಿಗುತ್ತಿವೆ. ಎಲ್ಲವನ್ನೂ ಅಳೆದು-ತೂಗಿ ಅವರು ಸಹಿ ಮಾಡುತ್ತಿದ್ದಾರೆ. ಈ ನಡುವೆ ಕೆಲವು ಚಿತ್ರಗಳ ಸ್ಕ್ರಿಪ್ಟ್ ಕೆಲಸದಲ್ಲೂ ಪೃಥ್ವಿ ತೊಡಗಿಕೊಂಡಿದ್ದಾರೆ ಎಂಬುದು ವಿಶೇಷ.
ದಿಯಾ ಸಿನಿಮಾದಲ್ಲಿ ಆದಿ ಪಾತ್ರದಲ್ಲಿ ನಟಿಸಿ ಪೃಥ್ವಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


