ಸಿನಿಮಾ ಸುದ್ದಿ

ಹಲವು ವರ್ಷಗಳ ನಂತರ ಮೊದಲ ಸಲ ರಿಯಲ್ ಸ್ಟಾರ್ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ

ಉಪ್ಪಿ-ರುಪ್ಪಿ ಎಂಬ ಶೀರ್ಷಿಕೆಯಲ್ಲಿ 2 ವರ್ಷಗಳ ಹಿಂದೆಯೇ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲು ನಿರ್ದೇಶಕ ಮಾದೇಶ್ ಮುಂದಾಗಿದ್ದರು. ಇದಕ್ಕೆ ರಚಿತಾ ರಾಮ್ ನಾಯಕಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ.

ಹಲವು ವರ್ಷಗಳ ನಂತರ ಮೊದಲ ಸಲ ರಿಯಲ್ ಸ್ಟಾರ್ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ
ಹರಿಪ್ರಿಯಾ- ಉಪೇಂದ್ರ
Published On :

ಉಪ್ಪಿ-ರುಪ್ಪಿ ಎಂಬ ಶೀರ್ಷಿಕೆಯಲ್ಲಿ 2 ವರ್ಷಗಳ ಹಿಂದೆಯೇ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲು ನಿರ್ದೇಶಕ ಮಾದೇಶ್ ಮುಂದಾಗಿದ್ದರು.  ಇದಕ್ಕೆ ರಚಿತಾ ರಾಮ್ ನಾಯಕಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ.

ಈ ಬಾರಿ ಹರಿಪ್ರಿಯಾ, ಉಪೇಂದ್ರ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಕೆ.ಮಾದೇಶ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದು, ಪಾತ್ರದ ಬಗ್ಗೆ ಎಕ್ಸೈಟ್‌ ಆಗಿದ್ದಾರೆ. 

ಕಥೆ ಹಾಗೂ ಪಾತ್ರ ತುಂಬಾ ಚೆನ್ನಾಗಿದೆ. ಬ್ರೇಕ್‌ನ ನಂತರ ಸಾಕಷ್ಟು ಕಥೆಗಳು ಹುಡುಕಿ ಬಂದವು. ಅದರಲ್ಲಿ ಉಪೇಂದ್ರ ಅವರು ನಾಯಕರಾಗಿರುವ ಸಿನಿಮಾದ ಕತೆ ಇಷ್ಟವಾಯಿತಂತೆ. 

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರೂ ಇವರಿಬ್ಬರೂ ಒಟ್ಟಿಗೆ ಇಲ್ಲಿಯವರೆಗೆ ಕಾಣಿಸಿಕೊಂಡಿರಲಿಲ್ಲ. ಜಾಹೀರಾತಿನಲ್ಲಿ ಅವರ ಜತೆ ನಟಿಸಿದ್ದರು.

ಈ ಹಿಂದೆಯೂ ಅವರ ಬೇರೆ ಸಿನಿಮಾಗಳಿಗೆ ಆಫರ್‌ ಬಂದಿತ್ತು. ಆದರೆ, ನಟನೆಗೆ ಅವಕಾಶ ಇರುತ್ತಿರಲಿಲ್ಲ ಅಥವಾ ಡೇಟ್ಸ್‌ ಸಮಸ್ಯೆ ಆಗುತ್ತಿತ್ತು. ಈ ಚಿತ್ರಕ್ಕೆ ಎರಡು ತಿಂಗಳ ಹಿಂದೆಯೇ ಅಪ್ರೋಚ್‌ ಮಾಡಿದ್ದರಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿದೆ. ನನಗೆ ಕಥೆ ಎಷ್ಟೇ ಚೆನ್ನಾಗಿದ್ದರೂ ಸ್ಟ್ರಾಂಗ್‌ ಟೀಮ್‌ ಕೂಡಾ ಮುಖ್ಯ ಎಂದು ಹರಿಪ್ರಿಯಾ ಹೇಳಿದ್ದಾರೆಯ

 ಇನ್ನೂ ಹೆಸರಿಡದ ಚಿತ್ರಕ್ಕೆ ಮಾದೇಶ್‌ ಅವರ ನಿರ್ದೇಶನ, ಸಾಧು ಕೋಕಿಲ ಅವರ ಸಂಗೀತ ಸಂಯೋಜನೆ ಮಾಡುತ್ತಿರುವುದು ನನಗೆ ವಿಶೇಷ. ಸಾಧು ಕೋಕಿಲ ಅವರ ಸಂಗೀತವಿದೆ, ಭ್ರಷ್ಟಾಚಾರ ಕುರಿತ ಕಥೆ ಇದಾಗಿದೆ ಎಂದು ಹೇಳಲಾಗಿದೆ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಉಪೇಂದ್ರ ಬ್ಯುಸಿಯಾಗಿರುವ ನಟ,  ಹೋಮ್ ಮಿನಿಸ್ಟರ್  ಕೂಡ ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಆರ್ .ಚಂದ್ರು ನಿರ್ದೇಶನದ ಕಬ್ಜಾ ಶೂಟಿಂಗ್ ನಲ್ಲಿ ಉಪೇಂದ್ರ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.