ಸಿನಿಮಾ ಸುದ್ದಿ

ಮಹಿಳಾ ದಿನಾಚರಣೆ: 'ಪವರ್ ಸ್ಟಾರ್' ಪವರ್ ಪುಲ್ ಸಂದೇಶ - ವಿಡಿಯೋ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಎಂಟಿಸಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಬಿಎಂಟಿಸಿ ರಾಯಭಾರಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಮಹಿಳಾ ದಿನಾಚರಣೆ: 'ಪವರ್ ಸ್ಟಾರ್' ಪವರ್ ಪುಲ್ ಸಂದೇಶ - ವಿಡಿಯೋ
ಪುನೀತ್ ರಾಜ್ ಕುಮಾರ್
Published On :

ಬೆಂಗಳೂರು:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಎಂಟಿಸಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಬಿಎಂಟಿಸಿ ರಾಯಭಾರಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ರಸ್ತೆಯಲ್ಲಿ ಓಡಾಡುವ ಯುವತಿಯರನ್ನು ಚುಡಾಯಿಸುವ ಪುಂಡರಿಗೆ ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸುವುದರ  ಜೊತೆಗೆ ನಿಮ್ಮ ಜೊತೆಗೆ ನಾವು ಇದ್ದೇವೆ ಎಂಬ ಒಗ್ಗಟ್ಟು ಪ್ರದರ್ಶನದ ವಿಡಿಯೋ ಇದಾಗಿದೆ. 

2. 01 ನಿಮಿಷದ ವಿಡಿಯೋದಲ್ಲಿ ನೀವೂ ಬರ್ತೀರಾ? ಎಲ್ಲರೂ ಸೇರಿ ನಿರ್ಭಯ ಸಮಾಜ ಕಟ್ಟೋಣ ಎಂದು ಪುನೀತ್ ರಾಜ್ ಕುಮಾರ್ ಹೇಳುತ್ತಾರೆ. 

ಕೆಲವೊಮ್ಮೆ ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡುಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ ಎಂದು ಬಿಎಂಟಿಸಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.