ಕಬ್ಜಾದಲ್ಲಿ ಉಪೇಂದ್ರ ಜೊತೆಗೆ ಕಬೀರ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ್ ರಾವ್
ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸೂಪರ್ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಬೆಂಗಳೂರು: ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸೂಪರ್ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.
ಸದ್ಯ ಉಪೇಂದ್ರ ಬುದ್ದಿವಂತ-2 ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು. ಕಬ್ಜಾ ಶೂಟಿಂಗ್ ಗೆ ಎಂಟ್ರಿಯಾಗಿದ್ದಾರೆ. ಭೂಗತ ಜಗತ್ತಿನ ಕಥೆಯಾದಾರಿತ ಸಿನಿಮಾ ಇದಾಗಿದೆ.
ಬೆಂಗಳೂರು, ಬಳ್ಳಾರಿ ಹಾಗೂ ಸಂಡೂರಿನಲ್ಲಿ ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ 1950 ರ ಕಾಲಘಟ್ಟದಲ್ಲಿ ಇದ್ದ ಸ್ಟೀಟ್, ಹೂವಿನ ಮಾರುಕಟ್ಟೆ, ಮಟನ್ ಮಾರುಕಟ್ಟೆ, ಕಡಪ ಜಿಲ್ಲೆಯ ಸರ್ಕಲ್, ಜೈಲು, ಆಸ್ಪತೆ, ಪೊಲೀಸ್ ಸ್ಟೇಷನ್ ಹಾಗೂ ಗ್ಯಾಂಗ್ವಾರ್ನ 8 ಅಡ್ಡಾಗಳ ಸೆಟ್ ಸೇರಿದಂತೆ ಒಟ್ಟು 18 ಸೆಟ್ಗಳು ಕೆ ಜಿ ಎಫ಼್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿದೆ.
ಉಪೇಂದ್ರ ಜೊತೆಗೆ ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಹಾಗೂ ಕಾಟ್ ರಾಜು ಮತ್ತು ಸುಬ್ಬರಾಜು ನಟಿಸುತ್ತಿದ್ದಾರೆ. ಅವಿನಾಶ್, ವಿಕ್ರಮ್ ಸೇರಿದಂತೆ ಹಲವು ಕಲಾವಿದರು ಸಿನಿಮದಲ್ಲಿ ನಟಿಸುತ್ತಿದ್ದಾರೆ.
ಉಪೇಂದ್ರ, ರಾಹುಲ್ದೇವ್, ನವೀನ್, ಕಾಮರಾಜನ್, ಕೋಟ ಶ್ರೀನಿವಾಸ್, ತೆಲುಗಿನ ಜಯಪ್ರಕಾಶ್, ಕಾಟ್ರಾಜು, ಸುಬ್ಬರಾಜು ಮುಂತಾದವರು ದ್ವಿತೀಯ ಹಂತದ ಚಿತ್ರೀಕರಣದಲ್ಲಿ ಅಭಿನಯಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


