ಸಿನಿಮಾ ಸುದ್ದಿ

ಮಹಿಳಾ ಕೇಂದ್ರಿತ ಕಥಾನಕ 'ಓಂ ಪ್ರೇಮ' ಮೂಲಕ ಹರ್ಷಿಕಾ ಪೂಣಚ್ಚ ಮತ್ತೆ ಬೆಳ್ಳಿತೆರೆಗೆ

ಅಡವಿಬಾವಿ ಶರಣ್ ನಿರ್ದೇಶನದ "ಓಂ ಪ್ರೇಮ" ಎಂಬ ಚಿತ್ರದೊಡನೆ ಹರ್ಷಿಕಾ ಪೂಣಚ್ಚ ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಈ ಹಿಂದೆ "ಚಿಟ್ಟೆ" ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿದ್ದರು.

ಮಹಿಳಾ ಕೇಂದ್ರಿತ ಕಥಾನಕ 'ಓಂ ಪ್ರೇಮ' ಮೂಲಕ ಹರ್ಷಿಕಾ ಪೂಣಚ್ಚ ಮತ್ತೆ ಬೆಳ್ಳಿತೆರೆಗೆ
ಹರ್ಷಿಕಾ ಪೂಣಚ್ಚ
Published On :

ಅಡವಿಬಾವಿ ಶರಣ್ ನಿರ್ದೇಶನದ "ಓಂ ಪ್ರೇಮ" ಎಂಬ ಚಿತ್ರದೊಡನೆ ಹರ್ಷಿಕಾ ಪೂಣಚ್ಚ ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ  ನಟಿ ಈ ಹಿಂದೆ "ಚಿಟ್ಟೆ" ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿದ್ದರು. ಅಲ್ಲದೆ  2019 ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ "ಉದ್ಘರ್ಷ"ದ ಭಾಗವಾಗಿದ್ದರು.

Story image

ಆರ್.ಆರ್. ಖುಷಿ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸುತ್ತಿರುವ ರಾಮ್ ಪ್ರೀತ್ ನಿರ್ಮಿಸಿದ ಈ ಚಿತ್ರದಲ್ಲಿ ಕ್ವಾಟ್ಲ್ ಖ್ಯಾತಿಯ ಪಾರ್ಥ ಕೂಡನಟಿಸಿದ್ದಾರೆ.

Story image

ಶೇಕಡಾ 40 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಹರ್ಷಿಕಾ ಪೂಣಚ್ಚ ಅವರೊಂದಿಗೆ ಮಾತುಕತೆ ನಡೆಸಿದ್ದು, ಲಾಕ್‌ಡೌನ್ ಅವಧಿಯಲ್ಲಿ ಒಪ್ಪಂದವು ಅಂತಿಮಗೊಂಡಿದೆ."ನಾವು ಈಗ ಶೂಟಿಂಗ್ ಪುನರಾರಂಭಿಸಲು ತಯಾರಾಗುತ್ತಿದ್ದೇವೆ ಈ ಶೆಡ್ಯೂಲ್ ಹೆಚ್ಚಾಗಿ ಹರ್ಷಿಕಾಅವರ ಪಾತ್ರದ ಕುರಿತಾಗಿರಲಿದೆ. " ಎಂದು ನಿರ್ದೇಶಕ ಹೇಳಿದ್ದಾರೆ.

Story image

"ಓಂ ಪ್ರೇಮ" ಚಿತ್ರಕ್ಕೆ ಗೌಸ್ ಪೀರ್ ಸಂಭಾಷಣೆ, ಜಾಸ್ಸಿ ಗಿಫ್ಟ್ ಸಂಗೀತವಿದೆ. ಛಾಯಾಗ್ರಾಹಕರಾಗಿ ನಂದ ಕಿಶೋರ್ ಹಾಗೂ  ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಡ್ಯಾನಿ ಕುಟ್ಟಪ್ಪಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.