ಸಿನಿಮಾ ಸುದ್ದಿಮಹಿಳಾ ಕೇಂದ್ರಿತ ಕಥಾನಕ 'ಓಂ ಪ್ರೇಮ' ಮೂಲಕ ಹರ್ಷಿಕಾ ಪೂಣಚ್ಚ ಮತ್ತೆ ಬೆಳ್ಳಿತೆರೆಗೆ
ಅಡವಿಬಾವಿ ಶರಣ್ ನಿರ್ದೇಶನದ "ಓಂ ಪ್ರೇಮ" ಎಂಬ ಚಿತ್ರದೊಡನೆ ಹರ್ಷಿಕಾ ಪೂಣಚ್ಚ ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಈ ಹಿಂದೆ "ಚಿಟ್ಟೆ" ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿದ್ದರು.