ಲಾಕ್‌ಡೌನ್ ಬಳಿಕ ಬರ್ತಿದ್ದಾರೆ 'ಹೋಂ ಮಿನಿಸ್ಟರ್': ರಿಯಲ್ ಸ್ಟಾರ್ ಚಿತ್ರಕ್ಕೆ ಸಿಕ್ಕಿದೆ ಯು/ಎ ಪ್ರಮಾಣಪತ್ರ
ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷ್ಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.

ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷಿಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.
ಉಪೇಂದ್ರ ಅಭಿನಯದ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು / ಎ ಪ್ರಮಾಣಪತ್ರ ನೀಡಿದೆ. ಪೂರ್ಣ ನಾಯ್ಡು ಪ್ರೊಡಕ್ಷನ್ಸ್ ಅಡಿಯಲ್ಲಿ ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರ ಲಾಕ್ ಡೌನ್ ನಂತರದಲ್ಲಿ ತೆರೆಕಾಣುತ್ತಿರುವ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಹೋಂ ಮಿನಿಸ್ಟರ್ ಚಿತ್ರಕ್ಕೆ ಉಪ್ಪಿ ಜೋಡಿಯಾಗಿ ವೇದಿಕಾ ಕುಮಾರ್ ಕಾಣಿಸಿಕೊಳ್ಳುತ್ತಿದ್ದು ತಾನ್ಯಾ ಹೋಪ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಶೀರ್ಷಿಕೆಯು ಕುತೂಹಲವನ್ನು ಹುಟ್ಟುಹಾಕಿದ್ದು ವಿಶೇಷವಾಗಿ ಉಪೇಂದ್ರ ಈ ಹಿಂದೆ ಚಿತ್ರ ಶೀರ್ಷಿಕೆಗೆ ಹಲವು ಅರ್ಥಗಳಿದೆ ಎಂದು ಪತ್ರಿಕೆಗೆ ತಿಳಿಸಿದ್ದರು. "ಇದು ರಾಜಕೀಯ ಕಥಾನಕ ಎಂದು ಭಾವಿಸಲಾಗುತ್ತದೆ. ಆದರೆ ಹೋಂ ಮಿನಿಸ್ಟರ್ ಮನೆಯಲ್ಲೇ ಯಾರನ್ನಾದರೂ ಗುರುತಿಸಲು ಬಳಸುವ ಪದವಾಗಿರಬಹುದು. " ಉಪೇಂದ್ರ ಹೇಳಿದ್ದಾರೆ.
ಹೋಂ ಮಿನ್ಸ್ಟರ್ ಚಿತ್ರಕ್ಕೆ 2.0 ರ ಆಂಟನಿ ಖ್ಯಾತಿಯಮೊಹಮದ್ ಘಿಬ್ರಾನ್ ಸಂಗೀತ ಸಂಯೋಜಿಸಿದ್ದರೆ ಸಾಧು ಕೋಕಿಲಾ ಮತ್ತು ಅವಿನಾಶ್ ಪ್ರಮುಖ ಪಾತ್ರದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


