ಸಿನಿಮಾ ಸುದ್ದಿ

ಈತ ಜಗ್ಗೇಶ, ನನ್ನ ಇಷ್ಟದ ಆಂಜನೇಯ ಎಂದಿದ್ದರು ಡಾ. ರಾಜ್ ಕುಮಾರ್!

ಚಿತ್ರರಂಗದ ಕುರಿತ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುವ ಜಗ್ಗೇಶ್‌ ಅವರು, ಇತ್ತೀಚೆಗೆ ರಾಜ್‌ ಅವರ ಕುರಿತ ನೆನಪೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ

ಈತ ಜಗ್ಗೇಶ, ನನ್ನ ಇಷ್ಟದ ಆಂಜನೇಯ ಎಂದಿದ್ದರು ಡಾ. ರಾಜ್ ಕುಮಾರ್!
ಡಾ.ರಾಜ್ ಕುಮಾರ್
Published On :

ಬೆಂಗಳೂರು: ಚಿತ್ರರಂಗದ ಕುರಿತ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುವ ಜಗ್ಗೇಶ್‌ ಅವರು, ಇತ್ತೀಚೆಗೆ ರಾಜ್‌ ಅವರ ಕುರಿತ ನೆನಪೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ. 

ತೆಲುಗು ಚಿತ್ರರಂಗದ ದಿಗ್ಗಜ ನಾಗೇಶ್ವರ್‌ ರಾವ್‌, ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರೊಂದಿಗೆ ಜಗ್ಗೇಶ್‌ ಇರುವ ಚಿತ್ರವೊಂದನ್ನು ಅವರ ಅಭಿಮಾನಿಯೊಬ್ಬರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜಗ್ಗೇಶ್‌ ಮೆಲುಕು ಹಾಕಿದ್ದಾರೆ.

‘ಜಾಲತಾಣದ ಮಿತ್ರನೊಬ್ಬ ಹಂಚಿಕೊಂಡಿದ್ದ ನಾನು ನೋಡಿರದ ಚಿತ್ರ ಇದು. ಚಿತ್ರ ತುಂಬ ಸಂತೋಷ ನೀಡಿತು. ಇದು 1996/97 ಇರಬಹುದು ಎಂದು ಭಾವಿಸುವೆ. ಆದರೆ ಸರಿಯಾಗಿ ನೆನಪಿಲ್ಲ. ಆದರೆ, ಅಣ್ಣ (ರಾಜಕುಮಾರ್‌) ನನ್ನನ್ನು ನಾಗೇಶ್ವರ ರಾವ್ ರವರಿಗೆ ಪರಿಚಯಿಸಿದ ರೀತಿ ನೆನಪಿದೆ ‘ಧಣಿ, ಈತ ಜಗ್ಗೇಶ ಅಂತ. ಬಹಳ ಪ್ರತಿಭಾವಂತ ನಟ. ಜೊತೆಗೆ ನನ್ನ ಇಷ್ಟದ ಆಂಜನೇಯ ಎಂದುಬಿಟ್ಟರು. ಆಗ ನಾಗೇಶ್ವರ ರಾಯರು ಹೀಗೆ ಹಿರಿಯರ ಪ್ರೀತಿ ಗಳಿಸುವುದು ಒಂದು ತಪಸ್ಸು ಎಂದರು,’ ಎಂದು ಜಗ್ಗೇಶ್‌ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.