ಕೈಯಲ್ಲಿ ಹಲವು ಚಿತ್ರಗಳಿರುವಂತೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಧನಂಜಯ್!
ಟಗರು ಡಾಳಿ ಖ್ಯಾತಿಯ ಧನಂಜಯ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿಕ್ರಮ್ ರವಿಚಂದ್ರನ್ ಅಭಿಯನದ ಚೊಚ್ಚಲ ಚಿತ್ರ ತ್ರಿವಿಕ್ರಮ ನಿರ್ಮಿಸುತ್ತಿರುವ ಗೌರಿ ಎಂಟರ್ ಟೈನರ್ಸ್ ನೊಂದಿಗೆ ಧನಂಜಯ್ ಜೊತೆಗೂಡಿದ್ದಾರೆ.

ಬೆಂಗಳೂರು: ಟಗರು ಡಾಳಿ ಖ್ಯಾತಿಯ ಧನಂಜಯ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿಕ್ರಮ್ ರವಿಚಂದ್ರನ್ ಅಭಿಯನದ ಚೊಚ್ಚಲ ಚಿತ್ರ ತ್ರಿವಿಕ್ರಮ ನಿರ್ಮಿಸುತ್ತಿರುವ ಗೌರಿ ಎಂಟರ್ ಟೈನರ್ಸ್ ನೊಂದಿಗೆ ಧನಂಜಯ್ ಜೊತೆಗೂಡಿದ್ದಾರೆ.
ಈ ವಿಷಯವನ್ನು ಸ್ಪಷ್ಪಪಡಿಸಿರುವ ಧನಂಜಯ್, ನಿರ್ಮಾಪಕರು ಹಲವು ವರ್ಷಗಳಿಂದ ಗೊತ್ತಿದ್ದು, ಹೊಸ ಚಿತ್ರದೊಂದಿಗೆ ಅವರೊಂದಿಗೆ ಜೊತೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ನಿರ್ಮಾಪಕರಾದ ಸೋಮಣ್ಣ ಮತ್ತು ಸುರೇಶ್ ಅವರೊಂದಿಗೆ ಚಿತ್ರ ಮಾಡುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ಕಥೆಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಧನಂಜಯ್ ಹೇಳಿದ್ದಾರೆ.
ಧನಂಜಯ್ ಪ್ರಸ್ತುತ ಬಡವ ರಾಸ್ಕಲ್ ಚಿತ್ರದ ಡಬ್ಬಿಂಗ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬೆಂಗಳೂರು ಡಾನ್ ಎಂಪಿ ಜಯರಾಜ್ ಪಾತ್ರದ ಕಡೆಯೂ ಗಮನ ಹರಿಸಿದ್ದಾರೆ.ಇದು ಎರಡು ಭಾಗಗಳಾಗಿ ಹೊರಬರಲಿದ್ದು, ಅಗ್ನಿ ಶ್ರೀಧರ್ ಸಂಭಾಷಣೆ ಹಾಗೂ ಕಥೆ ಬರೆಯುತ್ತಿರುವ ಚಿತ್ರಕ್ಕೆ ಶೂನ್ಯಾ ಆಕ್ಷನ್ ಕಟ್ ಹೇಳಲಿದ್ದಾರೆ. ಸಂತೋಷ್ ಆನಂದ್ ರಾಮ್ ಅವರ ಯುವರತ್ನ ಚಿತ್ರದಲ್ಲೂ ಪುನೀತ್ ಜೊತೆಗೆ ಧನಂಜಯ್ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಧ್ರವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲೂ ಧನಂಜಯ್ ತನ್ನ ಪೊಗರು ಪ್ರದರ್ಶಿಸಲಿದ್ದಾರೆ.
ಡಾಳಿ ಚಿತ್ರದ ಶೇ.25ರಷ್ಚು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕನ್ನಡ ಚಿತ್ರವಲ್ಲದೆ ತೆಲುಗಿನ ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಚಿತ್ರದಲ್ಲೂ ಧನಂಜಯ್ ಅಭಿನಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


