ಸಿನಿಮಾ ಸುದ್ದಿ

'ರಾಬರ್ಟ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ದರ್ಶನ್ ಅಭಿಮಾನಿಗಳಿಗೆ ಖುಷಿ

ಕನ್ನಡದ ಮುಂಬರುವ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನೆಮಾ ದರ್ಶನ್ ಅವರ ರಾಬರ್ಟ್. ಕೊರೋನಾ ಹಾವಳಿಯಿಲ್ಲದಿರುತ್ತಿದ್ದರೆ ಕಳೆದ ಏಪ್ರಿಲ್ 9ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನಾ ಬಂದು ರಾಬರ್ಟ್ ಚಿತ್ರದ ಕೆಲಸಗಳೆಲ್ಲವೂ ಮುಂದೆ ಹೋಯಿತು.

'ರಾಬರ್ಟ್' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ದರ್ಶನ್ ಅಭಿಮಾನಿಗಳಿಗೆ ಖುಷಿ
ರಾಬರ್ಟ್ ಪೋಸ್ಟರ್
Published On :

ಬೆಂಗಳೂರು: ಕನ್ನಡದ ಮುಂಬರುವ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನೆಮಾ ದರ್ಶನ್ ಅವರ ರಾಬರ್ಟ್. ಕೊರೋನಾ ಹಾವಳಿಯಿಲ್ಲದಿರುತ್ತಿದ್ದರೆ ಕಳೆದ ಏಪ್ರಿಲ್ 9ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನಾ ಬಂದು ರಾಬರ್ಟ್ ಚಿತ್ರದ ಕೆಲಸಗಳೆಲ್ಲವೂ ಮುಂದೆ ಹೋಯಿತು.

ದರ್ಶನ್ ಅಭಿಮಾನಿಗಳು ಸಹಜವಾಗಿ ಬೇಸರಗೊಂಡಿದ್ದರು. ಅಭಿಮಾನಿಗಳ ಕೋರಿಕೆಯಂತೆ ಹಾಡು, ಪೋಸ್ಟರ್​ಗಳು ಬಿಡುಗಡೆ ಆದವು. ಇದೀಗ ಮತ್ತೊಂದು ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ದರ್ಶನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.

ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರ ಜನ್ಮದಿನದ ಪ್ರಯುಕ್ತ ರಾಬರ್ಟ್​ ತಂಡದಿಂದ ಹೊಸ ಪೊಸ್ಟರ್ ಬಿಡುಗಡೆಯಾಗಿದ್ದು, ಕೈಯಲ್ಲಿ ಗಿಟಾರ್​ ಹಿಡಿದ ಭಂಗಿಯಲ್ಲಿ ದರ್ಶನ್​ ಕಾಣಿಸಿಕೊಂಡು, ಪೋಸ್ಟರ್ ಮೂಲಕ ನಿರ್ಮಾಪಕರಿಗೆ ಶುಭಾಶಯ ಕೋರಿದೆ ಚಿತ್ರತಂಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.