'ಲಾ' ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ!
ಅಮೆಜಾನ್ ಪ್ರೈಮ್ ವಿಡಿಯೋ ಇಂದು ತಮ್ಮ ಮೊದಲ ಕನ್ನಡ ಡೈರೆಕ್ಟ್-ಟು-ಸರ್ವಿಸ್ ಚಲನಚಿತ್ರ 'ಲಾ' ಎಂಬ ಕ್ರಿಮಿನಲ್ ಸಸ್ಪೆನ್ಸ್ ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿತು. ಇದು ಬಹು ದೊಡ್ಡ ಅಪರಾಧಕ್ಕೆ ನ್ಯಾಯವನ್ನು ಕೋರುವ ಕಾನೂನು ವಿದ್ಯಾರ್ಥಿಯಾದ ನಂದಿನಿ ಅವರ ಜೀವನದ ಕತೆಯನ್ನು ಒಳಗೊಂಡಿದೆ.

ಬೆಂಗಳೂರು: ಅಮೆಜಾನ್ ಪ್ರೈಮ್ ವಿಡಿಯೋ ಇಂದು ತಮ್ಮ ಮೊದಲ ಕನ್ನಡ ಡೈರೆಕ್ಟ್-ಟು-ಸರ್ವಿಸ್ ಚಲನಚಿತ್ರ 'ಲಾ' ಎಂಬ ಕ್ರಿಮಿನಲ್ ಸಸ್ಪೆನ್ಸ್ ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿತು. ಇದು ಬಹು ದೊಡ್ಡ ಅಪರಾಧಕ್ಕೆ ನ್ಯಾಯವನ್ನು ಕೋರುವ ಕಾನೂನು ವಿದ್ಯಾರ್ಥಿಯಾದ ನಂದಿನಿ ಅವರ ಜೀವನದ ಕತೆಯನ್ನು ಒಳಗೊಂಡಿದೆ. 'ಲಾ' ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್, ಎಂ ಗೋವಿಂದ ನಿರ್ಮಿಸಿದ್ದಾರೆ ಮತ್ತು ರಘು ಸಮರ್ಥ್ ನಿರ್ದೇಶಿಸಿದ್ದಾರೆ. 'ಲಾ' ಕನ್ನಡ ಸಿನೆಮಾದ ಮುಖ್ಯ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಅವರು ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ ಮೊದಲ ಚಿತ್ರ ಇದಾಗಿದೆ. ಉಳಿದಂತೆ ತಾರಾಗಣದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ ಇತರರು ನಟಿಸಿದ್ದಾರೆ.
ಪೊಣ್ ಮಗಳ್ ವಂದಾಳ್ (ತಮಿಳು), ಗುಲಾಬೊ ಸೀತಾಬೊ (ಹಿಂದಿ) ಮತ್ತು ಪೆಂಗ್ವಿನ್ (ಮಲಯಾಳಂ ಡಬ್‌ಗಳೊಂದಿಗೆ ತೆಲುಗು ಮತ್ತು ತಮಿಳು) ಯಶಸ್ವಿಯಾಗಿ ಬಿಡುಗಡೆಯಾದ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನ ಕಾಣುತ್ತಿರುವ ಅಂದರೆ ಬಿಡುಗಡೆಯಾಗುವ ನಾಲ್ಕನೇ ಡೈರೆಕ್ಟ್-ಟು-ಸರ್ವೀಸ್ ಚಲನಚಿತ್ರ 'ಲಾ' ಆಗಲಿದೆ. ಭಾರತದಲ್ಲಿ ಮತ್ತು ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಲ್ಲಿ ಪ್ರೈಮ್ ಸದಸ್ಯರು 2020 ರ ಜುಲೈ 17 ರಿಂದ ಕನ್ನಡದಲ್ಲಿ ಬಹುನಿರೀಕ್ಷಿತ 'ಲಾ' ಚಲನಚಿತ್ರವನ್ನು ವೀಕ್ಷಿಸಬಹುದು.
"ಲಾ ಚಿತ್ರ ನನ್ನ ಹೃದಯಕ್ಕೆ ಹತ್ತಿರದಲ್ಲಿದೆ, ಅದು ನನ್ನ ಚೊಚ್ಚಲ ಚಿತ್ರ ಎಂಬುದು ಮಾತ್ರ ಇದಕ್ಕೆ ಕಾರಣವಲ್ಲ, ಈ ಚಿತ್ರವು ಸದಾ ಮೂಲೆಗೆ ಒತ್ತಲ್ಪಡುವ ಪ್ರಮುಖ ಸಂದೇಶದ ಮೇಲೆ ಬೆಳಕು ಚೆಲ್ಲುತ್ತದೆ" ಎಂದ 'ಲಾ' ಚಿತ್ರದ ನಾಯಕ ನಟಿ ರಾಗಿಣಿ ಪ್ರಜ್ವಲ್, “ನಂದಿನಿ, ದೃಢ ಮತ್ತು ಗಟ್ಟಿ ಹೃದಯದ ಮಹಿಳೆಯಾಗಿದ್ದು, ಕಠಿಣ ಪರಿಸ್ಥಿತಿಯನ್ನು ಸಂಪೂರ್ಣ ದೃಢ ನಿಶ್ಚಯ ಮತ್ತು ಪರಿಶ್ರಮದಿಂದ ಜಯಿಸುವವಳು. ಈ ಪ್ರಕಾರದಲ್ಲಿ ಲಾ ಚಿತ್ರ ದಾಖಲೆ ಬರೆಯುವುದು ಖಚಿತ. ಇದನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ನಾನು ಭಾವಿಸುತ್ತೇನೆ. ಲಾ ಚಿತ್ರದ ಕನಸಿನ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನಮ್ಮ ಚಿತ್ರ ಭಾರತದಲ್ಲಿ ಮಾತ್ರವಲ್ಲ 200 ದೇಶಗಳು ಮತ್ತು ಪ್ರಾಂತ್ಯಗಳ ಪ್ರೇಕ್ಷಕರಿಗೆ ಲಭ್ಯವಾಗುತ್ತದೆ ಎಂಬುದನ್ನು ಕೇಳಿ ನಾನು ರೋಮಾಂಚನಗೊಂಡಿದ್ದೇನೆ. ಈ ಪ್ರಕಾರದ ಬಿಡುಗಡೆ ಅತ್ಯಂತ ಪರಿಣಾಮಕಾರಿಯಾಗಿದೆ" ಎಂದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, “ಅಮೆಜಾನ್ ಪ್ರೈಮ್ ವಿಡಿಯೋ ನಮ್ಮ ಅತ್ಯಮೂಲ್ಯ ಪಾಲುದಾರರಲ್ಲಿ ಒಬ್ಬರು. ಇದಕ್ಕೂ ಮುನ್ನ 2016 ರಲ್ಲಿ ನಮ್ಮ ನಿರ್ಮಾಣದ ಚಿತ್ರಗಳಾದ 'ಕವಲುದಾರಿ' ಮತ್ತು 'ಮಾಯಾ ಬಜಾರ್' ಅದ್ಭುತ ಯಶಸ್ಸಿನ ನಂತರ, 'ಲಾ' ಚಿತ್ರದ ಮೂಲಕ ಮೂರನೇ ಸಹಯೋಗವಾಗಿದೆ ಮತ್ತು ನಾವು ವಿಶ್ವದಾದ್ಯಂತ ಬಿಡುಗಡೆ ಅಮೆಜಾನ್ ಪ್ರೈಮ್ ವಿಡಿಯೋದ ಪ್ರೈಮ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದೇವೆ. 'ಲಾ' ಚಿತ್ರದೊಂದಿಗೆ ನಾವು ನಮ್ಮ ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇವೆ, ಅದರೊಂದಿಗೆ ಮಹತ್ವದ ವಿಷಯವೊಂದನ್ನು ಬೆಳಕಿಗೆ ತರುತ್ತೇವೆ. 200 ದೇಶಗಳು ಮತ್ತು ಪ್ರಾಂತ್ಯಗಳ ಪ್ರೈಮ್ ಸದಸ್ಯರು ತಮ್ಮ ಮನೆಯಲ್ಲೇ ಸುರಕ್ಷತೆಯಿಂದ ಕುಳಿತು ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬುದೇ ಖುಷಿ ನೀಡುವ ಸಂಗತಿ" ಎಂದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್, ಎಂ.ಗೋವಿಂದ ನಿರ್ಮಾಣದ, ರಘು ಸಮರ್ಥ್ ನಿರ್ದೇಶನದ 'ಲಾ' ಚಿತ್ರದಲ್ಲಿ ತಾರೆಯರಾದ ರಾಗಿಣಿ ಪ್ರಜ್ವಲ್, ಮುಖಮಂತ್ರಿ ಚಂದ್ರು, ಸುಧಾರಾಣಿ ಮತ್ತು ಅಚ್ಯುತ್ ಕುಮಾರ್ ಮತ್ತಿತರರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


