ಮುಂದಿನ ಪೀಳಿಗೆಗಾಗಿ 2,000-3,000 ಹಳೆಯ ಕನ್ನಡ ಚಲನಚಿತ್ರಗಳ ಡಿಜಿಟಲೀಕರಣ: ಸುನೀಲ್ ಪುರಾಣಿಕ್
ಭವಿಷ್ಯದ ಪೀಳಿಯ ದೃಷ್ಟಿಯಿಂದ ಹಳೆಯ ಕನ್ನಡ ಚಲನಚಿತ್ರಗಳ ಪಟ್ಟಿಯಿಂದ ಆಯ್ದ 2,000-3,000 ಚಲನಚಿತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.

ಭವಿಷ್ಯದ ಪೀಳಿಯ ದೃಷ್ಟಿಯಿಂದ ಹಳೆಯ ಕನ್ನಡ ಚಲನಚಿತ್ರಗಳ ಪಟ್ಟಿಯಿಂದ ಆಯ್ದ 2,000-3,000 ಚಲನಚಿತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.
ಗುರುವಾರ ಶಿವಮೊಗ್ಗದ ಸ್ ಟ್ರಸ್ಟ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪುರಾಣಿಕ್, ಪ್ರತಿವರ್ಷ ಸುಮಾರು 100-200 ಚಲನಚಿತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುವುದುಒಂದು ಚಲನಚಿತ್ರವನ್ನು ಡಿಜಿಟೈಜ್ ಮಾಡಲು 1.5-3 ಲಕ್ಷ ರೂ ತಗುಲುತ್ತದೆ. ಎಂದು ಅವರು ಹೇಳಿದ್ದಾರೆ. ಪುರಾಣಿಕ್ ತಾವು ಚಲನಚಿತ್ರ ಅಕಾಡಮಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಸುಮಾರು 2.5 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಕಾಡೆಮಿಗೆ ನೀಡಿದ್ದಾರೆ. ಆ ಭೂಮಿಯಲ್ಲಿ 4-5 ಚಿತ್ರಮಂದಿರಗಳನ್ನು ಒಳಗೊಂಡಿರುವ ಚಲನಚಿತ್ರ ಸಂಕೀರ್ಣವನ್ನು ನಿರ್ಮಿಸಲು ಅಕಾಡೆಮಿ ಯೋಜಿಸಿದೆ. ಸಂಕೀರ್ಣದೊಳಗೆ ಚಿತ್ರಮಂದಿರಗಳ ನಿರ್ಮಾಣವಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಅಕಾಡೆಮಿ ಖಾಸಗಿ ಚಿತ್ರಮಂದಿರಗಳನ್ನು ಬಾಡಿಗೆಗೆ ಪಡೆಯುವುದನ್ನು ತಪ್ಪಿಸಬಹುದು ಎಂದರು.
ಕೊಡವ, ತುಳು ಮತ್ತು ಇತರ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳನ್ನು ಉತ್ತೇಜಿಸಲು ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಪ್ರಾರಂಭಿಸಲು ಯೋಜಿಸಿರುವುದಾಗಿ ಹೇಳಿದ ಔರಾಣಿಕ್ “ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವ ನಡೆಸಲು ರಾಜ್ಯ ಸರ್ಕಾರ ಹಣ ನೀಡಿದೆ. ನಾನು ಅದನ್ನು ಶಿವಮೊಗ್ಗದಿಂದಲೇ ಪ್ರಾರಂಭಿಸಲು ಚಿಂತನೆ ನಡೆಸಿದ್ದೇನೆ" ಎಂದಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದ ಕೊಡುಗೆ ಮತ್ತು ಇತಿಹಾಸವನ್ನು ವಿವರಿಸಲುನಿರ್ದೇಶಕರು ಮತ್ತು ನಟರ ಪ್ರೊಫೈಲ್‌ಗಳನ್ನು ಒಳಗೊಂಡಿರುವ ಫಿಲ್ಮ್ ಮ್ಯೂಸಿಯಂ ಮತ್ತು ಗ್ರಂಥಾಲಯವನ್ನುಸ್ಥಾಪಿಸುವ ಅಗತ್ಯವಿದೆ ಎಂದು ಪುರಾಣಿಕ್ ಹೇಳಿದರು. ಅಲ್ಲದೆ ಅಕಾಡಮಿ ವತಿಯಿಂದ ಗ್ರಾಫಿಕ್ ಮತ್ತು ಆನಿಮೇಷನ್ ಕೋರ್ಸ್ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತಿದ್ದು 5-6 ಜಿಲ್ಲೆಗಳಿಂದ ಅಂತಹ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈ ತರಬೇತಿ ಒದಗಿಸಲಾಗುತ್ತದೆ.ಇದು ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


