ಬೆಂಗಳೂರು: ಆಶ್ರಮದ ಮಕ್ಕಳಿಗೆ ಹಾಸಿಗೆ ಒದಗಿಸಿದ ನಟ ಚೇತನ್ ಕುಮಾರ್, ಮೇಘ!
ಸ್ಟಾರ್ ಗಳ ಮದುವೆ ಎಂದರೆ ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.

ಬೆಂಗಳೂರು: ಸ್ಟಾರ್ ಗಳ ಮದುವೆ ಎಂದರೆ ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.
ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ವಿವಾಹವಾಗುತ್ತಿದ್ದಾರೆ. ಸಮಾಜ ಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್ ಕುಮಾರ್, ಹುಟ್ಟಿನಿಂದ ಶ್ರೀಮಂತನಾಗಿದ್ದರೂ ಸರಳವಾಗಿ ಅನಾಥ ಶ್ರಮದಲ್ಲಿ ಮಕ್ಕಳ ಎದುರು ಅಂದು ಸಂಜೆ 6 ಗಂಟೆಗೆ ಇಬ್ಬರು ಏರಲಿದ್ದಾರೆ.
ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಚೇತನ್ ಹಾಗೂ ಮೇಘ ಇದೀಗ ಸರಳವಾಗಿ ವಿವಾಹವಾಗುತ್ತಿದ್ದು, ಮದುವೆಯ ಆಮಂತ್ರಣ ಪತ್ರಿಕೆ ಕೂಡಾ ವಿಭಿನ್ನವಾಗಿ ಗಮನ ಸೆಳೆದಿತ್ತು. ಲಗ್ನ ಪತ್ರಿಕೆಯೊಳಗೆ ಬೀಜವನ್ನು ಹುದುಗಿಸಿ ಇಡಲಾಗಿತ್ತು. ಪತ್ರಿಕೆಯನ್ನು ಓದಿ ಎಸೆದರೂ ಅದು ಅಲ್ಲೆ ಚಿಗುರೊಡೆಯುತ್ತೆ ಎಂದು ಬರೆಯಲಾಗಿತ್ತು.
ಇನ್ನೂ ಅಡಂಬರವಿಲ್ಲದೆ ಸರಳವಾಗಿ ನಡೆಯಲಿರುವ ಈ ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ , ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಹಾಗೂ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ಸರಳ ಮದುವೆ ಹಿನ್ನೆಲೆಯಲ್ಲಿ ಚೇತನ್ ಕುಮಾರ್ ಹಾಗೂ ಮೇಘ ಆಶ್ರಮದ ಮಕ್ಕಳಿಗೆ ಹಾಸಿಗೆಯನ್ನು ಒದಗಿಸಿದ್ದಾರೆ. ಹಾಸಿಗೆಯ ಜೊತೆಯಲ್ಲಿರುವ ಪೋಟೋಗಳನ್ನು ಟ್ವೀಟರ್ ನಲ್ಲಿ ಚೇತನ್ ಕುಮಾರ್ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


