ಬಿಗ್ ಬಿ ಅಮಿತಾಬ್ ಜೊತೆಗೆ ಶಿವರಾಜ್ ಕುಮಾರ್ , ಪೋಟೋ ವೈರಲ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ದಕ್ಷಿಣ ಭಾರತದ ಸ್ಟಾರ್ ಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಾಗಾರ್ಜನ ಹಾಗೂ ಪ್ರಭು ಅವರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ದಕ್ಷಿಣ ಭಾರತದ ಸ್ಟಾರ್ ಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಾಗಾರ್ಜನ ಹಾಗೂ ಪ್ರಭು ಅವರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಭಾರತೀಯ ಚಿತ್ರರಂಗದ ಮೂವರು ಲೆಜೆಂಡ್ ಸ್ಟಾರ್ ನಟರ ಮಕ್ಕಳೊಂದಿಗೆ ಕೆಲಸ ಮಾಡಿದದ್ದು, ಜಯ ಬಚ್ಚನ್ ಹಾಗೂ ತಮಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಅಮಿತಾಬ್ ಬಚ್ಚನ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಇದು ಕಲ್ಯಾಣ್ ಜ್ಯುವೆಲ್ಲರಿ ಆಡ್ ಗಾಗಿ ಮಾಡಿರುವ ಪೋಟೋ ಶೂಟ್ ಆಗಿದ್ದು, ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ತೆಲುಗಿನಲ್ಲಿ ಅಕ್ಕಿನೆನಿ ನಾಗೇಶ್ವರ್ ರಾವ್ ಪುತ್ರ ನಾಗಾರ್ಜುನ, ಕನ್ನಡದಲ್ಲಿ ಡಾ. ರಾಜ್ ಕುಮಾರ್ ಪುತ್ರ ಡಾ. ಶಿವರಾಜ್ ಕುಮಾರ್ ಹಾಗೂ ತಮಿಳಿನಲ್ಲಿ ಶಿವಾಜಿ ಗಣೇಶನ್ ಪುತ್ರ ಪ್ರಭು ಬ್ರಾಂಡ್ ರಾಯಬಾರಿಯಾಗಿದ್ದಾರೆ.
ಇದಕ್ಕೂ ಮುನ್ನ ಜಯ ಬಚ್ಚನ್, ಕತ್ರಿನಾ ಕೈಫ್, ದಕ್ಷಿಣ ಭಾರತದ ನಟಿಯರಾದ ಮಂಜು ವಾರಿಯರ್, ರೆಗಿನಾ ಕ್ಯಾಸ್ಸಾಂದ್ರಾ, ರೆಬಾ ಮೊನಿಕಾ ಜಾನ್, ಮತ್ತು ನಿಧಿ ಅಗರ್ ವಾಲ್ ಅವರೊಂದಿಗೆ ಅಮಿತಾಬ್ ಬಚ್ಚನ್ ಪೋಟೋ ಶೂಟ್ ನಡೆದಿತ್ತು. ಇದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


