ಕಾಮಿಡಿಯನ್ ಮಾತ್ರವಲ್ಲ, ಸೂಕ್ತ ನಟನಾಗಿ ಗುರುತಿಸಿಕೊಂಡಿದ್ದಕ್ಕೆ ಹೆಮ್ಮೆಯಾಗುತ್ತಿದೆ- ಶಿವರಾಜ್ ಕೆ ಆರ್ ಪೇಟೆ
ಹಾಸ್ಯದ ಮೂಲಕ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಶಿವರಾಜ್ ಕೆ. ಆರ್. ಪೇಟೆ ನಟನಾಗುವ ಕನಸು ಹೊತ್ತು 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು.

ಬೆಂಗಳೂರು: ಹಾಸ್ಯದ ಮೂಲಕ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಶಿವರಾಜ್ ಕೆ. ಆರ್. ಪೇಟೆ ನಟನಾಗುವ ಕನಸು ಹೊತ್ತು 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು.
ಆದಾಗ್ಯೂ, ಸರಿಯಾದ ಅವಕಾಶ ಸಿಕ್ಕಿರಲಿಲ್ಲ.ಕಾಮಡಿ ಕಿಲಾಡಿಗಳು ರಿಯಾಲಿಟಿ ಶೋ ಅವರ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ನೀಡಿತು. ಅಲ್ಲಿಂದ ಶಿವರಾಜ್ ಹಿಂದಿರುಗಿ ನೋಡಿಯೇ ಇಲ್ಲ.
ಎರಡು ವರ್ಷಗಳ ಅವಧಿಯಲ್ಲಿ 24 ಸಿನಿಮಾಗಳಲ್ಲಿ ಕಾಮಿಡಿಯನ್ ಪಾತ್ರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಮತ್ತು ಗುಂಡ ಚಿತ್ರದ ಮೂಲಕ ಹಿರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವರು ತಮ್ಮನ್ನು ತಾವು ಹಿರೋ ಎಂದು ಅಂದುಕೊಂಡಲ್ಲ. ಕಲಾವಿದನಾಗಿ ತಮ್ಮ ಪಾತ್ರವನ್ನು ಮಾಡಿರುವುದಾಗಿ ಅವರು ಹೇಳುತ್ತಾರೆ.
ನಾನು ಮತ್ತು ಗುಂಡ ಚಿತ್ರದಲ್ಲಿ ವಿಶಿಷ್ಠ ಪಾತ್ರ ಮಾಡಿದ್ದೇನೆ. ಈ ಚಿತ್ರದಲ್ಲಿ ನನ್ನೊಂದಿಗೆ ಪಾತ್ರ ಶೇರ್ ಮಾಡಿಕೊಂಡಿರುವ ಸಿಂಬಾ ಮತ್ತು ಗುಂಡಾ ಶ್ವಾನಗಳಿಗೆ ಎಲ್ಲ ಕ್ರೆಡಿಟ್ ನೀಡುತ್ತೇನೆ ಎಂದಿದ್ದಾರೆ.
ಪಾತ್ರಗಳ ಸೃಷ್ಟಿಕರ್ತರಾಗಿರುವ ನಿರ್ದೇಶಕರು ಸರಿಯಾದ ನಟರನ್ನು ಆಯ್ಕೆ ಮಾಡಬೇಕಾಗುತ್ತದೆ ಎಂಬುದು ನಿರ್ದೇಶಕ ಶ್ರೀನಿವಾಸ್ ಅವರ ಮಾತಾಗಿದೆ.
ಪಾತ್ರಕ್ಕೆ ನ್ಯಾಯ ಒದಗಿಸಿರುವುದಾಗಿ ತಿಮ್ಮಯ್ಯ ಹಾಗೂ ರಘು ಹಾಸನ್ ಹೇಳಿದ್ದಾರೆ. ಕಾಮಿಡಿಯನ್ ಮಾತ್ರವಲ್ಲದೇ ನಟನಾಗಿ ತಮ್ಮನ್ನು ಉಪಚರಿಸಿದ್ದಾರೆ. ಶ್ವಾನಗಳ ಜೊತೆಗಿನ ಅಭಿನಯ ವಿಶಿಷ್ಠ ಅನುಭವ ನೀಡಿದೆ ಎಂದು ಶಿವರಾಜ್ ಕೆ ಆರ್ ಪೇಟೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


