ಸಿನಿಮಾ ಸುದ್ದಿ

ಅರ್ಧ ಶೂಟಿಂಗ್ ಮುಗಿಸಿದ ಸುಮಂತ್‌ ಶೈಲೇಂದ್ರ ನಟನೆಯ ಗೋವಿಂದ ಗೋವಿಂದಾ!

ಕನ್ನಡದ ಹಿರಿಯ ನಿರ್ಮಾಪಕ ಎಸ್‌. ಶೈಲೇಂದ್ರ ಬಾಬು ಪುತ್ರ ಸುಮಂತ್‌ ಶೈಲೇಂದ್ರ ನಟನೆಯ “ಗೋವಿಂದ’ ಸಿನಿಮಾ ಶೂಟಿಂಗ್ ಅರ್ಧದಷೇಟು ಮುಗಿದಿದ.

ಅರ್ಧ ಶೂಟಿಂಗ್ ಮುಗಿಸಿದ ಸುಮಂತ್‌ ಶೈಲೇಂದ್ರ ನಟನೆಯ ಗೋವಿಂದ ಗೋವಿಂದಾ!
ಸುಮಂತ್ ಮತ್ತು ಕವಿತಾ ಗೌಡ
Published On :

ಕನ್ನಡದ ಹಿರಿಯ ನಿರ್ಮಾಪಕ ಎಸ್‌. ಶೈಲೇಂದ್ರ ಬಾಬು ಪುತ್ರ ಸುಮಂತ್‌ ಶೈಲೇಂದ್ರ  ನಟನೆಯ “ಗೋವಿಂದ’ ಸಿನಿಮಾ ಶೂಟಿಂಗ್ ಅರ್ಧದಷೇಟು ಮುಗಿದಿದ.

ಕಾಮಿಡಿ ಕಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಗೋವಿಂದ ಗೋವಿಂದ’ ಚಿತ್ರದಲ್ಲಿ ಸುಮಂತ್‌, ಅನೇಕ ವರ್ಷಗಳಿಂದ ಪಿಯುಸಿ ಫೇಲ್‌ ಆಗುತ್ತಲೇ ಬರುತ್ತಿರುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. 

ಇನ್ನು “ಗೋವಿಂದ ಗೋವಿಂದ’ ಚಿತ್ರಕ್ಕೆ ನವ ನಿರ್ದೇಶಕ ತಿಲಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಇಲ್ಲಿಯವರೆಗೆ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ತಿಲಕ್‌, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪರಿಚಯವಾಗುತ್ತಿದ್ದಾರೆ. 

ಚಿತ್ರದಲ್ಲಿ ಸುಮಂತ್‌ ಶೈಲೇಂದ್ರಗೆ ನಾಯಕಿಯಾಗಿ ಕವಿತಾ ಗೌಡ ಜೋಡಿ. ಜಾಕಿ ಭಾವನಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರೂಪೇಶ್‌ ಶೆಟ್ಟಿ, ಬೆನಕ ಪವನ್‌, ಅಚ್ಯುತ ಕುಮಾರ್‌,  ಮತ್ತಿತರರ ಅಭಿನಯವಿದೆ.

ಸದ್ಯ “ಗೋವಿಂದ ಗೋವಿಂದ’ ಚಿತ್ರದ ಚಿತ್ರೀಕರಣ 45 ದಿನಗಳ ಶೂಟಿಂಗ್ ಮುಗಿಸಿದ್ದು. 20 ದಿನಗಳ ಶೂಟಿಂಗ್ ಬಾಕಿಯಿದೆ. ಬಿಜಾಪುರ, ಮಧುಗಿರಿ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆದಿದೆ.

ಸಿನಿಮಾದ ವಿಶೇಷ ಹಾಡಿಗೆ ನೂರ್ ಫತೇಹಿಯನ್ನು ಕರೆತರಲು ತಯಾರಿ ನಡೆಸಲಾಗಿದೆ.  ಸಿನಿಮಾಗೆ ಹಿತನ್ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.