'ಜಾನು 'ಚಿತ್ರ ನೋಡುತ್ತಲೇ ಹೃದಯಾಘಾತ, ಚಿತ್ರಮಂದಿರದಲ್ಲೇ ಪ್ರಾಣಬಿಟ್ಟ ಸಮಂತಾ ಅಭಿಮಾನಿ
ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿನಯದ "ಜಾನು" ಚಿತ್ರ ನೋಡುತ್ತಿದ್ದ ಪ್ರೇಕ್ಷಕನೊಬ್ಬ ಚಿತ್ರವೀಕ್ಷಣೆ ನಡುವೆಯೇ ಥಿಯೇಟರ್ ನಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.

ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿನಯದ "ಜಾನು" ಚಿತ್ರ ನೋಡುತ್ತಿದ್ದ ಪ್ರೇಕ್ಷಕನೊಬ್ಬ ಚಿತ್ರವೀಕ್ಷಣೆ ನಡುವೆಯೇ ಥಿಯೇಟರ್ ನಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.
ವಿವರಗಳ ಪ್ರಕಾರ 50 ವರ್ಷದ ಆಸುಪಾಸಿನವನಾಗಿದ್ದ ವ್ಯಕ್ತಿ ನಿನ್ನೆ ಸಂಜೆ ಶರ್ವಾನಂದ್ ಸಮಂತಾ ಚಿತ್ರ "ಜಾನು" ವೀಕ್ಷಣೆಗಾಗಿ ಎರ್ರಗಡ್ಡದಲ್ಲಿರುವ ಗೋಕುಲ್ ಥಿಯೇಟರ್ಗೆ ಭೇಟಿ ನೀಡಿದ್ದರು. ಆದರೆ ಚಿತ್ರವೀಕ್ಷಣೆ ಬಳಿಕ ಎಲ್ಲರೂ ಚಿತ್ರಮಂದಿರದಿಂದ ಎದ್ದು ಹೊರಬಂದರೂ ಕೂಡ ಆ ವ್ಯಕ್ತಿ ಆಸನದಲ್ಲಿಯೇ ಕುಳಿತಿದ್ದರು. ಎಷ್ಟು ಬಾರಿ ಕರೆದರೂ ಕುರ್ಚಿ ಬಿಟ್ಟು ಚಲಿಸದ ವ್ಯಕ್ತಿಯನ್ನು ಕಂಡ , ಥಿಯೇಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೋಲೀಸರು ವ್ಯಕ್ತಿ ಮೃತಪಟ್ಟಿದ್ದಾನೆಂದು ಘೋಷಿಸಿದರು.
ಎಸ್ಐ ಮಹೇಂದರ್ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಪ್ರದರ್ಶನದ ಸಮಯದಲ್ಲಿ ಈ ವ್ಯಕ್ತಿ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರುಭಾವಿಸಿದ್ದಾರೆ. ಆದರೆ ಯಾವುದೇ ಕೊಲೆ ಪ್ರಯತ್ನವನ್ನೂ ತಳ್ಳಿ ಹಾಕಿಲ್ಲದ ಪೋಲೀಸರು ಅನುಮಾನಾಸ್ಪದ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


