ನಿಖಿಲ್ ಹೊಸ ಚಿತ್ರದ ಮೂಲಕ ಕಾಶ್ಮೀರ ಪರದೇಶಿ ಸ್ಯಾಂಡಲ್ ವುಡ್ ಪ್ರವೇಶ?
ಗುಂಡೆ ಜಾರಿ ಗಲ್ಲಂತೈಯಿಂದೆ ಖ್ಯಾತಿಯ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಅಭಿನಯದ ಚಿತ್ರದ ಮೂಲಕ ಕನ್ನಡ ಚಿತ್ರ ನಿರ್ದೇಶಕಕ್ಕೆ ತೊಡಗಲಿದ್ದಾರೆ.ವಿಶೇಷವೆಂದರೆ ಜನವರಿ 31ರಿಂಡಲೇ ಚಿತ್ರೀಕರಣ ಪ್ರಾರಂಬಗೊಂಡಿದ್ದು ಇದೊಂದು ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಲಾಗಿದೆ. ಚಿತ್ರವನ್ನು ಟಿ ಸಿರೀಸ್ ಸಹಯೋಗದಲ್ಲಿ ಲಹರಿ ಪ್ರೊಡಕ್ಷನ್ ನಿರ

ಗುಂಡೆ ಜಾರಿ ಗಲ್ಲಂತೈಯಿಂದೆ ಖ್ಯಾತಿಯ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಅಭಿನಯದ ಚಿತ್ರದ ಮೂಲಕ ಕನ್ನಡ ಚಿತ್ರ ನಿರ್ದೇಶಕಕ್ಕೆ ತೊಡಗಲಿದ್ದಾರೆ.ವಿಶೇಷವೆಂದರೆ ಜನವರಿ 31ರಿಂಡಲೇ ಚಿತ್ರೀಕರಣ ಪ್ರಾರಂಬಗೊಂಡಿದ್ದು ಇದೊಂದು ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಲಾಗಿದೆ. ಚಿತ್ರವನ್ನು ಟಿ ಸಿರೀಸ್ ಸಹಯೋಗದಲ್ಲಿ ಲಹರಿ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.. ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕಾಶ್ಮೀರ ಪರದೇಶಿ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಿಖಿಲ್ ಗೆ ಜೋಡಿಯಾಗಲಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಜೊತೆಗೆ ವಿದ್ಯಾ ಬಾಲನ್, ನಿತ್ಯಾ ಮೆನೆನ್, ಮತ್ತು ತಾಪ್ಸಿ ಪನ್ನು ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಈ ನಟಿ ಸಿದ್ಧಾರ್ಥ್ ಅಭಿನಯದ ಸಿವಪ್ಪು ಮಂಜಲ್ ಪಚೈ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿಯೂ ಹೆಸರಾಗಿದ್ದಾರೆ.ಇಷ್ಟೇ ಅಲ್ಲದೆ ರಾಂಪಥ್ ಎಂಬ ಮರಾಠಿ ಚಿತ್ರ ಮತ್ತು ತೆಲುಗು ಚಿತ್ರ, ನರ್ತನಸಲದಲ್ಲಿ ಸಹ ಈ ನಟಿ ಅಭಿನಯಿಸಿದ್ದಾರೆ. ಇದೀಗ ನಿಖಿಲ್ ಕುಮಾರ್ ಅವರ ಚಿತ್ರ ಇವರಿಗೆ ಚೊಚ್ಚಲ ಕನ್ನಡ ಚಿತ್ರಆಗಿರಲಿದ್ದು ವಿವಿಧ ಕಲಾವಿದರೊಂದಿಗೆ ಹಲವಾರು ಸುತ್ತಿನ ಚರ್ಚೆಯ ನಂತರ ಚಿತ್ರತಂಡ ಈಕೆಯ ಹೆಸರನ್ನು ಅಂತಿಮವಾಗಿಸಿದೆ ಎಂದು ಮಾಹಿತಿ ಇದೆ. ಆದರೆ ಇದನ್ನಿನ್ನೂ ನಿರ್ಮಾಪಕರು ಅಧಿಕೃತವಾಗಿ ಹೇಳಿಲ್ಲ ಎಂಬುದು ಗಮನಾರ್ಹ.

ನಿಖಿಲ್ ಅವರ ಸ್ಪೋರ್ಟ್ಸ್ ಡ್ರಾಮಾದಲ್ಲಿ ಎರಡನೇ ನಾಯಕಿಯಾಗಿ ಸಂಪದ ಆಯ್ಕೆಯಾಗಿದ್ದಾರೆ "ಮಿಥುನ ರಾಶಿ" ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ ಈಗ ಬೆಳ್ಳಿ ಪರದೆಯತ್ತ ಬಂದಿದ್ದಾರೆ.ಸಂಪದ ಸಿಇಒ ಒಬ್ಬರ ಪುತ್ರಿಯಾಗಿ ಕಾಣಿಸಿಕೊಳ್ಲಲಿದ್ದು ನಿಖಿಲ್ ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


