ಸಿನಿಮಾ ಸುದ್ದಿ

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!

ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು.

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!
ಸಂಗ್ರಹ ಚಿತ್ರ
Published On :

ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು. 

ಎಷ್ಟೋ ಸಮಯ ಮಡುಗಟ್ಟಿದ ಶೋಕ ಹಾನಿಯ ತೀವ್ರತೆಗೆ ಸಾಕ್ಷಿಯಾಗಿತ್ತು. ಹೀಗೆ ಕಾಲದ ಕರೆಗೆ ಓಗೊಟ್ಟು ಹೊರಟವರು, ಉಳಿಸಿದ್ದು ಅಸಂಖ್ಯ ನೆನಪುಗಳನ್ನು. ಹೀಗೆ ಕಾಲದ ಕರೆಗೆ ಓಗೊಟ್ಟು ಹೊರಟ ಕಿರುತೆರೆ ಖ್ಯಾತ ಕಲಾವಿದರ ಮಾಹಿತಿ ಇಲ್ಲಿದೆ...

ಪದ್ಮನಾಭ್

Story image


ಕೆ.ಆರ್.ಪೇಟೆ ತಾಲೂಕಿನ ರಾಯನಸಮುದ್ರ ಗ್ರಾಮದ ನಿವಾಸಿಗಳು, ಪಂಚರಂಗಿ ಪಾಂಡು, ಉಘೇ ಉಘೇ ಮಹದೇಶ್ವರ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಹಾಸ್ಯ ನಟರಾಗಿ ನಟಿಸಿದ್ದ ಕಿರುತೆರೆ ನಟ ಪದ್ಮನಾಭ್ ಅವರು ಅಕ್ಟೋಬರ್ 1 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪದ್ಮನಾಭ್ ಅವರಿಗೆ 47 ವರ್ಷ ವಯಸ್ಸಾಗಿತ್ತು. 

ಸಿದ್ದರಾಜ್ ಕಲ್ಯಾಣ್‌ಕರ್

Story image


ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ಸೆಪ್ಟೆಂಬರ್ 8 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಸಿದ್ದರಾಜ್ ಕಲ್ಯಾಣ್ಕರ್ ಅವರಿಗೆ 60 ವರ್ಷ ವಯಸ್ಸಾಗಿತ್ತು. ಸಾಯುವ ಹಿಂದಿನದಿನದವರೆಗೂ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಸುಶೀಲ್ ಗೌಡ

Story image


ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್ ವುಡ್ ಕಿರುತೆರೆ ನಟ ನೇಣು ಬಿಗಿದುಕೊಂಡು ಜು.8 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶೀಲ್ ಗೌಡ ಅವರಿಗೆ 30 ವರ್ಷ ವಯಸ್ಸಾಗಿತ್ತು. 

ಹುಲಿವನ ಗಂಗಾಧರಯ್ಯ

Story image


ಕನ್ನಡ ಚಿತ್ರರಂಗ ಹಿರಿಯ ನಟ ಮತ್ತು ಕಿರುತೆರೆ ಪೋಷಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದ ಹುಲಿವನ್ ಗಂಗಾಧರ್‌ ಅವರು ಜು.18 ರಂದು ವಿಧಿವಶರಾಗಿದ್ದರು. ಗಂಗಾಧರಯ್ಯ ಅವರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದರು. ಗಂಗಾಧರಯ್ಯ ಅವರಿಗೆ 70 ವರ್ಷ ವಯಸ್ಸಾಗಿತ್ತು. 

ಮೆಬಿನಾ ಮೈಕಲ್

Story image


ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಖ್ಯಾತಿ ಗಳಿಸಿದ್ದ ವಿಜೇತೆ ಮೆಬಿನಾ ಮೈಕಲ್ ಅವರು ಅಪಘಾತದಿಂದಾಗಿ ಜೂನ್.3ರಂದು ಮೃತಪಟ್ಟಿದ್ದರು, ಮೆಬಿನಾ ಅವರಿಗೆ 22 ವರ್ಷ ವಯಸ್ಸಾಗಿತ್ತು. 

ಕೃಷ್ಣ ನಾಡಿಗ್

Story image


ಚಿತ್ರೀಕರಣವೊಂದರಲ್ಲಿ ತೊಡಗಿಕೊಂಡಿರುವಾಗಲೇ ಹೃದಯಾಘಾತ ಸಂಭವಿಸಿ ಖ್ಯಾತ ಕಿರುತೆರೆ ನಟ ಕೃಷ್ಣ ನಾಡಿಗ್ ಅವರು ಅಕ್ಟೋಬರ್ 18 ರಂದು ಮೃತಪಟ್ಟಿದ್ದರು. ಕೃಷ್ಣ ನಾಡಿಗ್ ಅವರಿಗೆ 60 ವರ್ಷ ವಯಸ್ಸಾಗಿತ್ತು. 

ರಾಕ್​ಲೈನ್​ ಸುಧಾಕರ್ 

Story image


ಕನ್ನಡ ಚಿತ್ರರಂಗದ ಹಾಸ್ಯ ನಟ ರಾಕ್​ಲೈನ್​ ಸುಧಾಕರ್ ಅವರು ಹೃದಯಾಘಾತದಿಂದ ಸೆಪ್ಟೆಂಬರ್ 24 ರಂದು ಮೃತಪಟ್ಟಿದ್ದರು. ಸುಧಾಕರ್ ಅವರಿಗೆ 65 ವರ್ಷ ವಯಸ್ಸಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.