ರೋಮ್ಯಾಂಟಿಕ್ ಹಾಡಿನೊಂದಿಗೆ ಉಡುಪಿಯಲ್ಲಿ 'ಫಾರ್ Regn' ಸಿನಿಮಾ ಶೂಟಿಂಗ್ ಆರಂಭ!
ನವೀನ್ ದ್ವಾರಕನಾಥ್ ನಿರ್ದೇಶನದ ಫಾರ್ Regn ಸಿನಿಮಾ ಶೂಟಿಂಗ್ ಮಂಗಳವಾರ ಉಡುಪಿಯಲ್ಲಿ ಆರಂಭವಾಗಿದೆ.

ನವೀನ್ ದ್ವಾರಕನಾಥ್ ನಿರ್ದೇಶನದ ಫಾರ್ Regn ಸಿನಿಮಾ ಶೂಟಿಂಗ್ ಮಂಗಳವಾರ ಉಡುಪಿಯಲ್ಲಿ ಆರಂಭವಾಗಿದೆ.
ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ರೋಮ್ಯಾಂಟಿಕ್ ಹಾಡಿನ ಶೂಟಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐದು ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು,ಉಡುಪಿ, ಮಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ.
ಶ್ಯಾಡೋ, ಹರಿವಿನ ಹಾದಿ ಮತ್ತು ಯೆಲ್ಲೋ ಬೋರ್ಡ್ ಮುಂತಾದ ಶಾರ್ಟ್ ಫಿಲ್ಮ್ ತಯಾರಿಸಿದ್ದ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಟೈಟಲ್ ಮೂಲಕವೇ ಗಮನ ಸೆಳೆದಿರುವ ನವೀನ್, ಲವ್ ಮಾಕ್ಟೇಲ್ ನಾಯಕಿ ಮಿಲನಾ ಮತ್ತು ದಿಯಾ ನಾಯಕ ಪೃಥ್ವಿ ಅಂಬರ್ ನನ್ನು ಮೊದಲ ಬಾರಿಗೆ ಒಗ್ಗೂಡಿಸಿ ತೆರೆ ಮೇಲೆ ತರುತ್ತಿದ್ದಾರೆ.
ತಬಲ ನಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸಿದ್ದ ತುಳು ನಟ ಅರವಿಂದ್ ಬೋಲಾರ್ ಕೂಡ ಮೊದಲ ಹಂತದ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಕಾಮಿಡಿ ರೋಮ್ಯಾಂಟಿಕ್ ಕಥೆಯುಳ್ಳ ಈ ಸಿನಿಮಾದಲ್ಲಿ ಸುಧಾರಾಣಿ, ಬಾಬು ಹಿರಣ್ಣಯ್ಯ ಮತ್ತು ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಜನವರಿ ಮೊದಲ ವಾರದಲ್ಲಿ ನಡೆಯುವ ಶೂಟಿಂಗ್ ನಲ್ಲಿ ಇವರೆಲ್ಲಾ ಭಾಗವಹಿಸಲಿದ್ದಾರೆ. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಹರೀಶ್ ಆರ್ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


