ಸಿನಿಮಾ ಸುದ್ದಿ

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಗೆ ಕೋವಿಡ್ ಸೋಂಕು!

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮ್ಮಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಗ್ಗೆ ನಟ ರಾಮ್ ಚರಣ್ ಮಂಗಳವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಗೆ ಕೋವಿಡ್ ಸೋಂಕು!
ರಾಮ್ ಚರಣ್
Published On :

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮ್ಮಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಗ್ಗೆ ನಟ ರಾಮ್ ಚರಣ್ ಮಂಗಳವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

“ನಾನು ಕೋವಿಡ್ -19 ಪಾಸಿಟಿವ್ ವರದಿ ಪಡೆದಿದ್ದೇನೆ. ಯಾವುದೇ ಲಕ್ಷಣಗಳಿಲ್ಲ, ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಗುಣಮುಖವಾಗಿ ಬರುತ್ತೇನೆಂದು ಆಶಿಸುತ್ತೇವೆ. 

“ಕಳೆದ ಎರಡು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿರಿ ಶೀಘ್ರದಲ್ಲೇ ನನ್ನ ಚೇತರಿಕೆಯ ಕುರಿತು ಹೆಚ್ಚಿನ ಮಾಹಿತಿ ಲಭಿಸಲಿದೆ." ಎಂದು ನಟ ಟ್ವೀಟ್ ಮಾಡಿದ್ದಾರೆ.

ರಾಮ್ ಚರಣ್ ಅವರು ಡಿಸೆಂಬರ್ 22 ರವರೆಗೆ ಎಸ್.ಎಸ್.ರಾಜಮೌಳಿ ಅವರ "ಆರ್.ಆರ್.ಆರ್." ಚಿತ್ರೀಕರಣದಲ್ಲಿದ್ದರು. ಅದೇ ದಿನ, ಅವರು ಸುಷ್ಮಿತಾ ಕೊನಿಡೆಲಾ  ಅವರ ವೆಬ್ ಸರಣಿ " ಶೂಟ್ ಔಟ್" ನ ಪ್ರಮೋಷನ್ ಗೆ ಸಹ ತೆರಳೀದ್ದರು. ಕ್ರಿಸ್‌ಮಸ್ ಮುನ್ನಾದಿನದಂದು, ನಟ ತನ್ನ ಕುಟುಂಬ ಸದಸ್ಯರಿಗೆ ಪಾರ್ಟಿ ಆಯೋಜಿಸಿದ್ದರು. ಈ ಸಂದರ್ಭದ ಫೋಟೋಗಳನ್ನು ಸಾಮಾಜಿಕ ತಾನಾದಲ್ಲಿ ಹಂಚಿಕೊಂಡಿದ್ದರು. ಈ ಪಾರ್ಟಿಯಲ್ಲಿ ಟಾಲಿವುಡ್ ನ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಕ್ರಿಸ್‌ಮಸ್‌ನ ನಂತರ, ರಾಮ್ ಚರಣ್ "ಆಚಾರ್ಯ" ಚಿತ್ರದ ಸೆಟ್ ಗಳಿಗೆ ಭೇಟಿ ನೀಡಿದ್ದರು. ಈ ತಿಂಗಳ ಆರಂಭದಲ್ಲಿ, ಅವರ ಕುಟುಂಬ ಸದಸ್ಯರು ಮತ್ತು ಅನೇಕ ಚಿತ್ರೋದ್ಯಮದ ಮುಖ್ಯರು ಉದಯಪುರದಲ್ಲಿ ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜೆ.ವಿ ಅವರ ವಿವಾಹದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.