ಒಮರ್ ಲುಲು ನಿರ್ದೇಶನದ 'ಪವರ್ ಸ್ಟಾರ್' ಚಿತ್ರದಲ್ಲಿ ಶ್ರೇಯಸ್ ಮಂಜು!
ನಿರ್ದೇಶಕ ಒಮರ್ ಲುಲು ಇದೀಗ 'ಪವರ್ ಸ್ಟಾರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು,ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯ ಸಾಗಿದೆ. ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಅಭಿನಯಿಸುವ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ.

ಬೆಂಗಳೂರು: ನಿರ್ದೇಶಕ ಒಮರ್ ಲುಲು ಇದೀಗ 'ಪವರ್ ಸ್ಟಾರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು,ಈ
ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯ ಸಾಗಿದೆ. ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಅಭಿನಯಿಸುವ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ.
ಶ್ರೇಯಸ್ ಮಂಜು ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರನಾಗಿದ್ದು, ಪಡ್ಡೆ ಹುಲಿ ಅವರು ಅಭಿನಯಿಸಿದ ಮೊದಲ ಚಿತ್ರ. ಪವರ್ ಸ್ಟಾರ್ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಇನ್ನೂ ಹಲವು ಮಂದಿ ಕನ್ನಡ ಕಲಾವಿದರನ್ನು ಸೇರಿಸಿಕೊಳ್ಳುವ ಬಗ್ಗೆ ಚಿತ್ರತಂಡ ಯೋಚಿಸಿದೆ.
ಮಲಯಾಳಂ ನಿರ್ದೇಶಕ ವಿ. ಕೆ ಪ್ರಕಾಶ್ ಮತ್ತು ನಟಿ ಪ್ರಿಯಾ ವಾರಿಯರ್ ಜೊತೆಗೆ ಈಗಾಗಲೇ ವಿಷ್ಣುಪ್ರಿಯ ಎಂಬ ಚಿತ್ರವನ್ನು ಶ್ರೇಯಸ್ ಮಂಜು ಮಾಡಿದ್ದು, ಅದರ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಬಾಬು ಆಂಟನಿ ಜೊತೆಗೆ ಕೆಲವು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಪವರ್ ಸ್ಟಾರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಹಿರಿಯ ಕಥೆಗಾರ ಡೆನ್ನೀಸ್ ಜೋಸೆಪ್ ಅವರು ಚಿತ್ರಕಥೆ ಬರೆದಿದ್ದು, ಒಮರ್ ಲುಲು ಅವರ ಹಿಂದಿನ ಚಿತ್ರಗಳಿಗಿಂತ ಇದು ಭಿನ್ನವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು, ವರ್ಚುವಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಾತೀಸ್ ಅನೆದಾತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


