'ಸ್ಪೂಕಿ ಕಾಲೇಜ್' ಸೇರಿಕೊಂಡ ದಿಯಾ ಖುಷಿ!
ದಿಯಾ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಖುಷಿ ರವಿ ಅವರು, ನಟ ಪೃಥ್ವಿ ಅಂಬರ್ ಜೊತೆಗೆ ಮತ್ತೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ದಿಯಾ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಖುಷಿ ರವಿ ಅವರು, ನಟ ಪೃಥ್ವಿ ಅಂಬರ್ ಜೊತೆಗೆ ಮತ್ತೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಖುಷಿ ಅವರು ಸ್ಫೂಕಿ ಕಾಲೇಜ್ ಚಿತ್ರದಲ್ಲಿ ಎರಡು ಶೇಡ್'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣದಂತಹ ಭರ್ಜಿ ಚಿತ್ರಗಳನ್ನು ನೀಡಿ, ಅಪಾರ ಜನರ ಮೆಚ್ಚುಗೆ ಗಳಿಸಿರುವ ಹೆಚ್.ಕೆ.ಪ್ರಕಾಶ್ ಅವರು ಸ್ಫೂಕಿ ಕಾಜೇಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಧಾರವಾಡದ 103 ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಚಿತ್ರದ ಚಿತ್ರೀಕರಣ ಕಳೆದ 25 ದಿನಗಳಿಂದಲೂ ನಡೆಯುತ್ತಿದೆ. ಈಗಾಗಲೇ ಚಿತ್ರ ತಂಡ ಶೇ.70ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರತಂಡ ಇದೀಗ ಬೆಂಗಳೂರಿನತ್ತ ಮುಖ ಮಾಡಿದೆ.
ಹಾರರ್, ಕಾಮಿಡಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ. ದಿಯಾ ಚಿತ್ರದಲ್ಲಿ ಸೂಕ್ಷ್ಮವಾದ ನಟಿಯಾಗಿ ಪ್ರೇಕ್ಷಕರು ನನ್ನನ್ನು ನೋಡಿದ್ದರು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ನಟಿ ಖುಷಿ ಹೇಳಿದ್ದಾರೆ.
ಚಿತ್ರದಲ್ಲಿ ಎರಡು ಶೇಡ್'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕರು ನನ್ನನ್ನು ಚಿತ್ರದಲ್ಲಿ ಜೋರಾಗಿರುವ ಪಾತ್ರದಲ್ಲಿಯೇ ತೋರಿಸುತ್ತಿದ್ದಾರೆ. ಹೊಸ ಪಾತ್ರ ನಿಭಾಯಿಸುವಾಗ ಸಾಮಾನ್ಯವಾಗಿಯೇ ಸಾಕಷ್ಟು ನಿರೀಕ್ಷೆಗಳು ಹಾಗೂ ಉತ್ಸಾಹಗಳು ಇದ್ದೇ ಇರುತ್ತವೆ. ಸ್ಫೂಕಿ ಚಿತ್ರದಲ್ಲೂ ಆ ಉತ್ಸಾಹವಿದೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ನಂತರ ದಾಂಡೇಲಿಯಲ್ಲಿಯೂ ಚಿತ್ರೀಕರಣ ನಡೆಸಲಿದೆ. ಚಿತ್ರಕ್ಕೆ ಮನೋಹರ್ ಜೋಷಿ ಅವರ ಛಾಯಾಗ್ರಹಣವಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.
ಶ್ರೀಕಾಂತ್ ಸಂಕಲನ ನಿರ್ವಹಿಸಲಿದ್ದಾರೆ. ವಿಶ್ವಾಸ್ ಕಲಾ ನಿರ್ದೇಶನವಿದೆ. ಚೇತನ್ ಅವರ ವಸ್ತ್ರವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಪೃಥ್ವಿ ರಾಷ್ಟ್ರಕೂಟ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ಬೆಳವಾಡಿ, ಹನುಮಂತೇಗೌಡ, ರಘು ರಮಣಕೊಪ್ಪ, ಅರವಿಂದ್ ಬೋಳಾರ್, ವಿಜಯ್ ಚೆಂಡೂರ್, ಎಂ.ಕೆ. ಮಠ, ಅಶ್ವಿನ್ ಹಾಸನ್ ತಾರಾಗಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


