ತಮಿಳು ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿ ಹೇಮಂತ್ ರವಿ ಬಂಧನ
ತಮಿಳು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಹೇಮಂತ್ ನನ್ನು ನಜರತ್ ಪೇಟೆ ಪೊಲೀಸರು ಬಂಧಸಿದ್ದಾರೆ.

ಚೆನ್ನೈ: ತಮಿಳು ಕಿರುತೆರೆಯ ಜನಪ್ರಿಯ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಹೇಮಂತ್ ನನ್ನು ನಜರತ್ ಪೇಟೆ ಪೊಲೀಸರು ಬಂಧಸಿದ್ದಾರೆ.
ಸೋಮವಾರ ರಾತ್ರಿ ಹೇಮಂತ್ ಬಂಧಿಸಿರುವುದನ್ನು ದೃಢಪಡಿಸಲಾಗಿದೆ. ಚಿತ್ರಾ ಹಾಗೂ ಹೇಮಂತ್ ಎರಡು ತಿಂಗಳುಗಳ ಹಿಂದಷ್ಟೇ ವಿವಾಹವಾಗಿದ್ದರು. ಚಿತ್ರಾ ಸಾವಿಗೆ ಪತಿ ಹೇಮಂತ್ ಕಾರಣ ಎಂದು ನಟಿಯ ತಾಯಿ ಆರೋಪಿಸಿದ್ದರು.
ಪಾಂಡಿಯನ್ ಸ್ಟೋರ್ಸ್ ತಮಿಳು ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ 29ವರ್ಷ ವಯಸ್ಸಿನ ವಿಜೆ ಚಿತ್ರಾ ಚೆನ್ನೈನ ನಜರಥ್ ಪೇಟ್ ನಲ್ಲಿರುವ ಹೋಟೆಲ್ ರೂಮೊಂದರಲ್ಲಿ ಡಿಸೆಂಬರ್ 9ರಂದು ಶವವಾಗಿ ಪತ್ತೆಯಾಗಿದ್ದರು.
ಅಂದು ಮಧ್ಯಾಹ್ನ 1 ಗಂಟೆಗೆ ಹೋಟೆಲ್ ರೂಮಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ನೇರ ಇಲ್ಲಿಗೆ ಬಂದಿದ್ದಂತೆ ತೋರುತ್ತಿತ್ತು. ಪತಿ ಹೇಮಂತ್ ರವಿ ಹೋಟೆಲ್ ನಿಂದ ತೆರಳಿದ ನಂತರ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದರು. ಉದ್ಯಮಿ ಹೇಮಂತ್ ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಪೊನ್ನೇರಿ ಜೈಲಿನಲ್ಲಿರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


