ಸಿನಿಮಾ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ತೆಲುಗು ಖಳನಟ ವಿವಾದಾತ್ಮಕ ಹೇಳಿಕೆ; ಅಭಿಮಾನಿಗಳ ಆಕ್ರೋಶ, ವಿಡಿಯೋ!

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದರಿಂದ ವಿಷ್ಣು ಅಭಿಮಾನಿಗಳು ಕೆರಳಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ತೆಲುಗು ಖಳನಟ ವಿವಾದಾತ್ಮಕ ಹೇಳಿಕೆ; ಅಭಿಮಾನಿಗಳ ಆಕ್ರೋಶ, ವಿಡಿಯೋ!
ವಿಜಯ್ ರಂಗರಾಜು
Published On :

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದರಿಂದ ವಿಷ್ಣು ಅಭಿಮಾನಿಗಳು ಕೆರಳಿದ್ದಾರೆ. 

ತೆಲುಗು ನಟ ವಿಜಯ್ ರಂಗರಾಜು ಎಂಬುವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇದೆ ಎಂದು ಹೇಳಿದ್ದಾರೆ. ಇದು ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿದೆ. ಈ ಸಂಬಂಧ ನ್ಯಾಯಕ್ಕಾಗಿ ವಿಷ್ಣು ಅಭಿಮಾನಿಗಳು ವಾಣಿಜ್ಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದಾರೆ. 

ಕನ್ನಡದ ಮುತ್ತೈದೆ ಭಾಗ್ಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಾನು ಆ ಚಿತ್ರದಲ್ಲಿ ಅಭಿನಯಿಸಿದ್ದೆ. ಈ ವೇಳೆ ಸೆಟ್ ಗೆ ಹೋದಾಗ ಅಲ್ಲಿ ನಟಿ ಜಯಮಾಲಿನಿ ಅವರು ನನ್ನನ್ನು ನೋಡಿ ಅಪ್ಪಿಕೊಂಡರು. ಇದರಿಂದ ಬೇಸರಗೊಂಡ ವಿಷ್ಣುವರ್ಧನ್ ಅವರು ನಮ್ಮಿಬ್ಬರನ್ನು ಸೆಟ್ ನಿಂದ ಹೊರಗೆ ಕಳಿಸಿ ಎಂದು ನಿರ್ದೇಶಕರಿಗೆ ಹೇಳಿದ್ದರು.

ಅವರನ್ನು ಯಾಕೆ ಸೆಟ್ ನಿಂದ ಕಳುಹಿಸಬೇಕು ಎಂದು ಕೇಳಿದ್ದಕ್ಕೆ ನನಗೆ ಡಿಸ್ಟರ್ಬ್ ಆಗುತ್ತದೆ ಅಂದಿದ್ದರು. ವಿಷ್ಣುವರ್ಧನ್ ಅವರಿಗೆ ಕೆಲವು ವೀಕ್ ನೆಸ್ ಇತ್ತು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.