ಮಾರ್ಗ ಚಿತ್ರದ ಮೂಲಕ ಆಕ್ಷನ್-ಥ್ರಿಲ್ಲರ್ ಹಾದಿಯಲ್ಲಿ ನಟ ಚೇತನ್!
ನಟ ಚೇತನ್ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. 2017ರಲ್ಲಿ ಚೇತನ್ ಅಭಿನಯಿಸಿದ್ದ ಅತಿರಥ ಚಿತ್ರ ಬಿಡುಗಡೆಯಾಗಿತ್ತು. ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಟ ಚೇತನ್ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. 2017ರಲ್ಲಿ ಚೇತನ್ ಅಭಿನಯಿಸಿದ್ದ ಅತಿರಥ ಚಿತ್ರ ಬಿಡುಗಡೆಯಾಗಿತ್ತು. ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಗಣೇಶ ಹಬ್ಬದ ದಿನ ಸರಳವಾಗಿ ಮುಹೂರ್ತ ನಡೆದಿದ್ದು ನಟ ಪುನೀತ್ ರಾಜಕುಮಾರ್ ಕ್ಲಾಪ್ ಮಾಡಿದರು.
ಮಾರ್ಗ ಮೋಹನ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮೋಹನ್ ಇದೀಗ ನಿರ್ದೇಶಕನ ಕ್ಯಾಪ್ ದರಿಸಿದ್ದಾರೆ. "ಗಮ್ಯಸ್ಥಾನಕ್ಕಾಗಿ ಒಂದು ನಿರ್ದಿಷ್ಟ ಹಾದಿಯನ್ನು ನಾಯಕ ತೆಗೆದುಕೊಳ್ಳುತ್ತಾನೆ, ಈ ಮಾರ್ಗವು ಸರಿಯಾ ಅಥವಾ ತಪ್ಪಾ ಎಂಬುದೇ ಮಾರ್ಗ ಚಿತ್ರದ ಸಾರಾಂಶವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಈ ಚಿತ್ರ ಕಮರ್ಶಿಯಲ್ ಎಲಿಮೆಂಟ್ಸ್ ಜೊತೆಗೆ ಸಾಮಾಜಿಕ ಸಂದೇಶವನ್ನು ಹೊಂದಿರುವ ಮನರಂಜನಾ ಚಿತ್ರವಾಗಿರಲಿದೆ.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ ದಿಯಾ ನಾಯಕಿ ಕುಶಿ, ಮಾರ್ಗ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು ಎಸ್.ಕೆ.ರಾವ್ ಅವರ ಛಾಯಾಗ್ರಹಣವಿದೆ. ಸೆಪ್ಟೆಂಬರ್ ಎರಡನೇ ವಾರದಿಂದ ಶೂಟಿಂಗ್ ಪ್ರಾರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


