ನಿರಂಜನ್ ಸುಧೀಂದ್ರ ಚೊಚ್ಚಲ ಚಿತ್ರದ ಟೈಟಲ್ 'ಸೂಪರ್ ಸ್ಟಾರ್'
ನಟ ಹಾಗೂ ರಾಜಕಾರಣಿ ಉಪೇಂದ್ರ ಅವರ ಸೋದರನ ಪುತ್ರ ನಿರಂಜನ್ ಸುಧೀಂದ್ರ ಅವರ ಚೊಚ್ಚಲ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಡಲಾಗಿದೆ. 2010ರಲ್ಲಿ ಉಪೇಂದ್ರ ನಟನೆಯ ಸೂಪರ್ ಚಿತ್ರ ತೆರೆಗೆ ಬಂದಿತ್ತು. ಅದರ ಶೀರ್ಷಿಕೆ ಜೊತೆಗೆ ಸ್ಟಾರ್ ಸೇರಿಸಿ ಇಡಲಾಗಿದೆ.

ನಟ ಹಾಗೂ ರಾಜಕಾರಣಿ ಉಪೇಂದ್ರ ಅವರ ಸೋದರನ ಪುತ್ರ ನಿರಂಜನ್ ಸುಧೀಂದ್ರ ಅವರ ಚೊಚ್ಚಲ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಡಲಾಗಿದೆ. 2010ರಲ್ಲಿ ಉಪೇಂದ್ರ ನಟನೆಯ ಸೂಪರ್ ಚಿತ್ರ ತೆರೆಗೆ ಬಂದಿತ್ತು. ಅದರ ಶೀರ್ಷಿಕೆ ಜೊತೆಗೆ ಸ್ಟಾರ್ ಸೇರಿಸಿ ಇಡಲಾಗಿದೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದರು. ಡ್ಯಾನ್ಸರ್ ಪಾತ್ರದಲ್ಲಿ ನಟಿಸುತ್ತಿರುವ ನಿರಂಜನ್ ನಂತರ ಚಿತ್ರದಲ್ಲಿ ಡ್ಯಾನ್ಸಿಂಗ್ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಆಗುತ್ತಾರೆ. ಹೀಗಾಗಿ ಚಿತ್ರಕ್ಕೂ ಅದೇ ಹೆಸರನ್ನಿಡಲು ನಿರ್ಧರಿಸಲಾಗಿದೆ.
ಇದೇ 20ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ನಿರಂಜನ್ ಪ್ರಿಯಾಂಕಾ ಉಪೇಂದ್ರ ಅವರ ಸೆಕೆಂಡ್ ಹಾಫ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ್ದಾರೆ. ಈಗಾಗಲೇ ಚಿತ್ರದ ಒಂದು ಶೆಡ್ಯೂಲ್ ಮುಗಿದಿದ್ದು ಇನ್ನೊಂದು ಭಾಗ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿದೆ.
ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಕೂಡ ರಮೇಶ್ ಬಾಬು ಅವರದ್ದೇ. ಆರ್ ವಿಬಿ ಸಿನೆಮಾಸ್ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ. ಮೈಲಾರಿ ಪ್ರೊಡಕ್ಷನ್ ಕೂಡ ಕೈಜೋಡಿಸಿದೆ. ಸಂಗೀತ ನಿರ್ದೇಶನ ರಾಘವೇಂದ್ರ ವಿ, ಛಾಯಾಗ್ರಹಣ ಯೋಗಿ ಮತ್ತು ಸಂಕಲನ ವಿಜಯ್ ಎಂ ಕುಮಾರ್ ಅವರದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


