ಡಾಟ್ ವೆಬ್ ಸಿರೀಸ್ ನಲ್ಲಿ ಶಿಶಿರ್ ಶರ್ಮಾ ಜೊತೆ ಸುಮನ್ ನಗರ್ಕರ್
ಲಾಕ್ ಡೌನ್ ಸಮಯದಲ್ಲಿ ನಟಿ ಸುಮನ್ ನಗರ್ಕರ್ ಡಾಟ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಶಿಲ್ಪ ಕೃಷ್ಣನ್ ಶುಕ್ಲಾ ನಿರ್ದೇಶನದ ಈ ವೆಬ್ ಸಿರೀಸ್ ನಲ್ಲಿ ಶಿಶಿರ್ ಶರ್ಮಾ ಕೂಡ ಅಭಿನಯಿಸಲಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನಟಿ ಸುಮನ್ ನಗರ್ಕರ್ ಡಾಟ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಶಿಲ್ಪ ಕೃಷ್ಣನ್ ಶುಕ್ಲಾ ನಿರ್ದೇಶನದ ಈ ವೆಬ್ ಸಿರೀಸ್ ನಲ್ಲಿ ಶಿಶಿರ್ ಶರ್ಮಾ ಕೂಡ ಅಭಿನಯಿಸಲಿದ್ದಾರೆ.
ಆರು ಸಿನಿಮಾ ರಂಗದ 10 ಕಲಾವಿದರು ಈ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವೆಬ್ ಸರಣಿಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ.
ಪ್ರತಿ ಸಂಚಿಕೆಯಲ್ಲಿ ಡಾಟ್ಸ್ ಎಂಬ ಆನ್‌ಲೈನ್ ಅಪ್ಲಿಕೇಶನ್‌ನಿಂದ ಒಟ್ಟಿಗೆ ಸೇರುವ ಇಬ್ಬರು ಅಪರಿಚಿತರ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ.
ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ ಕರ್ ಫನಾ, ರಾಜಿ, ಸತ್ಯ ಮತ್ತು ಉರಿ ಸಿನಿಮಾಗಳಲ್ಲಿ ನಟಿಸಿದ್ದ ಶಿಶಿರ್ ಶರ್ಮಾ ಈ ವೆಬ್ ಸಿರೀಸ್ ನಲ್ಲಿ ಜೊತೆಯಾಗಿದ್ದಾರೆ.
ಮಲಯಾಳಂ ನ ಆಹಾನ್ ಕೃಷ್ಣ, ಶರಣ್ ಜಿತ್. ಅಪರ್ಣಾ ಪ್ರದೀಪ್, ಪರ್ಣ್ ಪೇತೆ, ರಾಘವ ರಂಗನಾಥನ್, ಲಲಿತ್ ಪ್ರಭಾಕರ್ ಮತ್ತು ಐಶ್ವರ್ಯಾ ಕುಮಾರ್ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


