ಕೊರೋನಾ ಜಾಗೃತಿ ಮೂಡಿಸಲು ಮುಂದಾದ ಸೂಪರ್ ಸ್ಟಾರ್ಗಳ 'ಫ್ಯಾಮಿಲಿ'
ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದ ಬಾಲಿವುಡ್, ಟಾಲಿವುಡ್ ಸ್ಟಾರ್ ಕಲಾವಿದರು "ಫ್ಯಾಮಿಲಿ" ಎಂಬ ಕಿರುಚಿತ್ರದ ಮೂಲಕ ಮಾರಕ ಕೊರೋನಾವೈರಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದ ಬಾಲಿವುಡ್, ಟಾಲಿವುಡ್ ಸ್ಟಾರ್ ಕಲಾವಿದರು "ಫ್ಯಾಮಿಲಿ" ಎಂಬ ಕಿರುಚಿತ್ರದ ಮೂಲಕ ಮಾರಕ ಕೊರೋನಾವೈರಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಸೂನ್ ಪಾಂಡೆ ನಿರ್ದೇಶನದ ಈ ಕಿರುಚಿತ್ರ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮತ್ತು ಮನೆಯಲ್ಲಿಯೇ ಉಳಿಯುವುದರ ಮಹತ್ವವನ್ನು ಹೇಳುಲ್ತ್ತಿದೆ. ಇದು ನಾಗರಿಕರನ್ನುತಾವು ಇದೇ ಹಾದಿಯಲ್ಲಿ ದಾಪುಗಾಲು ಹಾಕಲು ಪ್ರೇರಿಸುತ್ತಿದೆ.
"ಫ್ಯಾಮಿಲಿ" ಇಂದು ರಾತ್ರಿ 9 ಗಂಟೆಗೆ ಸೋನಿ ನೆಟ್ವರ್ಕ್ ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ. ಇದಲ್ಲದೆ ಸೋನಿ ಪಿಕ್ಚರ್ಸ್ ಇಂಡಿಯಾ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಅಮಿತಾಬ್ ಬಚ್ಚನ್ ಅವರ ವಿ ಆರ್ ಒನ್ ಎಂಬ ಉಪಕ್ರಮವನ್ನು ಬೆಂಬಲಿಸಿದೆ.
ಈ ಉಪಕ್ರಮವು ಅಖಿಲ ಭಾರತ ಚಲನಚಿತ್ರ ನೌಕರರ ಒಕ್ಕೂಟಕ್ಕೆ ಸೇರಿದ ದೈನಂದಿನ ಕೂಲಿ ಕಾರ್ಮಿಕರ 1 ಲಕ್ಷ ಮನೆಗಳಿಗೆ ಪಡಿತರವನ್ನು ಒದಗಿಸುತ್ತದೆ
"ನಾವು ಅಭೂತಪೂರ್ವ ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಈ ಪರೀಕ್ಷಾ ಕಾಲದಲ್ಲಿ ನಾವುಅಮಿತಾಬ್ ಬಚ್ಚನ್ ಅವರ ಉಪಕ್ರಮವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ" ಎಂದು ಕಲ್ಯಾಣ್ ಜ್ಯುವೆಲ್ಲರ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್.ಕಲ್ಯಾಣರಾಮನ್ ಹೇಳಿದರು "ನಮ್ಮ ಉದ್ಯಮದ ಎಲ್ಲಾ ಅತ್ಯುತ್ತಮ ಸೃಜನಶೀಲ ಮನಸ್ಸುಗಳನ್ನು ಒಟ್ಟುಗೂಡಿಸುವ ಕಾರಣ ಈ ಚಿತ್ರವು ತುಂಬಾ ವಿಶೇಷವಾಗಿದೆ." ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


