ಮಲಯಾಳಂ ನಟ ಕಾಳಿಂಗ ಸಸಿ ವಿಧಿವಶ
ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಹಿರಿಯ ನಟ ಕಾಳಿಂಗ ಸಸಿ(59) ವಿಧಿವಶರಾಗಿದ್ದಾರೆ. ಅಮೆನ್, ವೆಲ್ಲಿಮೂಂಗಾ, ಪಂಚಿಯೆಟ್ಟನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೋಜಿಕ್ಕೋಡ್: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಹಿರಿಯ ನಟ ಕಾಳಿಂಗ ಸಸಿ(59) ವಿಧಿವಶರಾಗಿದ್ದಾರೆ.
ಅಮೆನ್, ವೆಲ್ಲಿಮೂಂಗಾ, ಪಂಚಿಯೆಟ್ಟನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
1998 ರಲ್ಲಿ ಸಿನಿಮಾರಂಗಕ್ಕೆ ಸಸಿ ಕಾಲಿರಿಸಿದರು, ಅದಕ್ಕೂ ಮುನ್ನ ಸುಮಾರು 25 ವರ್ಷಗಳ ಕಾಲ ರಂಗ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಅವರು 500 ಪಾತ್ರಗಳನ್ನು ನಿರ್ವಹಸಿದ್ದರು.
ಕೋಜಿಕ್ಕೋಡ್ ನಲ್ಲಿ ಕಳಿಂಗ ಹೆಸರಿನ ರಂಗಭೂಮಿ ತಂಡ ಕಟ್ಟಿದ್ದರು. ತಾಕರಚೆಂದ ಅವರ ಮೊದಲ ಸಿನಿಮಾವಾಗಿದ್ದು, ರಂಜಿತ್ ನಟನೆಯ ಪ್ರಾಣಚೆಟ್ಟಿಯನ್ ಮೂಲಕ ಎಲ್ಲರ ಗಮನ ಸೆಳೆದಿದ್ದರು, ಕುನ್ನಗಮಂಗಲಮ್ ನಿವಾಸಿಯದ ಸಸಿ ಪತ್ನಿ ಪ್ರಭಾವತಿ ಅವರನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


