ಸಿನಿಮಾ ಸುದ್ದಿ

ರಮೇಶ್ ಅರವಿಂದ್ '100'ಚಿತ್ರಕ್ಕೆ ಯು/ಎ ಪ್ರಮಾಣಪತ್ರ-ತಕ್ಷಣಕ್ಕೆ ರಿಲೀಸ್ ಆಗಲ್ಲ ಎಂದ ನಿರ್ಮಾಪಕ ರಮೇಶ್ ರೆಡ್ಡಿ

ರಮೇಶ್ ಅರವಿಂದ್ ನಿರ್ದೇಶನದ ಮುಂಬರುವ ಚಿತ್ರ 100, ಲಾಕ್ ಡೌನ್ ಆಗುವ ಮುನ್ನ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ಯು / ಎ ಪ್ರಮಾಣಪತ್ರ ಸಿಕ್ಕಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಆದಾಗ್ಯೂ, ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವ ಮುನ್ನ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಕಾಯಲಾಗುತ್ತಿದೆ

ರಮೇಶ್ ಅರವಿಂದ್ '100'ಚಿತ್ರಕ್ಕೆ ಯು/ಎ ಪ್ರಮಾಣಪತ್ರ-ತಕ್ಷಣಕ್ಕೆ ರಿಲೀಸ್ ಆಗಲ್ಲ ಎಂದ ನಿರ್ಮಾಪಕ ರಮೇಶ್ ರೆಡ್ಡಿ
ರಮೇಶ್ ಅರವಿಂದ್
Published On :

ರಮೇಶ್ ಅರವಿಂದ್ ನಿರ್ದೇಶನದ ಮುಂಬರುವ ಚಿತ್ರ  100, ಲಾಕ್ ಡೌನ್ ಆಗುವ ಮುನ್ನ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ಯು / ಎ ಪ್ರಮಾಣಪತ್ರ ಸಿಕ್ಕಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಆದಾಗ್ಯೂ, ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವ ಮುನ್ನ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಕಾಯಲಾಗುತ್ತಿದೆ. ಚಿತ್ರೋದ್ಯಮ ಮತ್ತೆ ಮುಂಚಿನಂತೆ ಚೇತರಿಸಿಕೊಳ್ಲುವುದಕ್ಕಾಗಿ ನಾವು ಕಾತುರರಾಗಿದ್ದೇವೆಂದು  ನಿರ್ಮಾಪಕ ರಮೇಶ್ ರೆಡ್ಡಿ ಹೇಳುತ್ತಾರೆ. "ಚಲನಚಿತ್ರಗಳು ಪ್ರೇಕ್ಷಕರನ್ನು ರಂಜಿಸಲಿಕ್ಕಾಗಿ ಇದೆ. ನಾವು ಪ್ರೇಕ್ಷಕರ ಮುಂದೆ ನಮ್ಮ ಚಿತ್ರವನ್ನು ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ. , ಪ್ರಸ್ತುತ ಪರಿಸ್ಥಿತಿಯ ಕಾರಣದಿಂದಾಗಿ, ನಮ್ಮ ಚಿತ್ರ ಸಿದ್ಧವಾಗಿದ್ದರೂ, ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸುವ ಸ್ಥಿತಿಯಲ್ಲಿ ನಾವು ಇಲ್ಲ" ಎಂದು ಅವರು ಹೇಳಿದ್ದಾರೆ.

ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ತ್ರ್ಡ್ಡಿಯವರ ನಾಲ್ಕನೇ ಯೋಜನೆಯಾಗಿರುವ ಈ ಚಿತ್ರ ರಮೇಶ್ ಅರವಿಂದ್ ನಿರ್ದೇಶನದಲ್ಲಿ ತಯಾರಾಗಿದೆ. ನಿರ್ಮಾಪಕರು ಈ ಹಿಂದೆ "ಉಪ್ಪು ಹುಳಿ ಖಾರ"ದಂತಹಾ ಚಿತ್ರ ನಿರ್ಮಾಣ ಂಆಡಿದ್ದಾರೆ.ಮನ್ಸೂರ್ ನಿರ್ದೇಶನದ ನಾತಿಚರಾಮಿ, ಪಡ್ಡೇಹುಉಲಿ,  ಗುರು ದೇಶಪಾಂಡೆ ಅವರ ಹೆಲ್ಮೆಟ್ ಸಹ ಇವರ ಪ್ರೊಡಕ್ಷನ್ ಹೌಸ್ ನಲ್ಲಿ ಬಂದಿದೆ.100,  ಸೈಬರ್ ಅಪರಾಧ ಆಧಾರಿತ ಚಿತ್ರವಾಗಿದ್ದು  ನಿರ್ದೇಶಕ ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರನ್ನು ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ತೋರಿಸಲಾಗುತ್ತಿದೆ. 

ಷ್ಪಕ ವಿಮನಾ ನಂತರ ಎರಡನೇ ಬಾರಿಗೆ ರಚಿತಾ ರಾಮ್ ರಮೇಶ್ ಅರವಿಂದ್ ಅವರೊಡನೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿದ್ದಾರೆ.ಅವರು ರಮೇಶ್ ಸೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಪೂರ್ಣ ಅಭಿನಯಿಸಿದ್ದು ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.ಶಿವಾಜಿ ಸುರತ್ಕಲ್ ಖ್ಯಾತಿಯ ನಿರ್ದೇಶಕ ಆಕಾಶ್ ಶ್ರೀವಾತ್ಸ ಅವರು ತಾಂತ್ರಿಕ ಸಿಬ್ಬಂದಿಯ ಜತೆಯಲ್ಲಿ ಎಡಿಟಿಂಗ್ ಕೆಲಸ ನಿರ್ವಹಿಸಿದ್ದಾರೆ.

ಇನ್ನು ರಮೇಶ್ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರದಲ್ಲಿ ಸಹ ನಟಿಸಿದ್ದಾರೆ.ಮತ್ತು ಕ್ವೀನ್ ಚಿತ್ರದ  ಕನ್ನಡ ಮತ್ತು ತಮಿಳಿನ ರೀಮೇಕ್ ಸಹ ಪೂರ್ತಿ ಮಾಡಿದ್ದಾರೆ.ಕನ್ನಡದಲ್ಲಿ, ಚಿತ್ರಕ್ಕೆ ಬಟರ್ ಫ್ಲಯ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಪಾರುಲ್ ಯಾದವ್ ಅಭಿನಯಿಸಿದ್ದರೆ ತಮಿಳಿನಲ್ಲಿ  ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ ಚಿತ್ರಕ್ಕೆ ಪ್ಯಾರೀಸ್ ಎಂದು ನಾಮಕರಣ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.