ಕೊರೋನಾ ವೈರಸ್ ಭಾದೆ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ
ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ತಮ್ಮ 14 ದಿನಗಳ ಹೋಮ್ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ತಮ್ಮ 14 ದಿನಗಳ ಹೋಮ್ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
'ನಾನು ಸಿನಿಮಾ ಕೆಲಸಗಳಿಗೆ ಮಾ. 12 ಮತ್ತು ಮಾ. 15ರಂದು ಹೈದರಾಬಾದ್ ಮತ್ತು ಚೆನ್ನೈಗೆ ತೆರಳಿದ್ದೆ. ಅಂದಹಾಗೆ, ನಾನು ಪ್ರಯಾಣ ಮಾಡಿದ ಯಾವುದೇ ವಿಮಾನದಲ್ಲೂ ಕೊರೊನಾ ಪೀಡಿತರು ಇರಲಿಲ್ಲ. ಅಲ್ಲದೆ, ಕರ್ನಾಟಕದ ಯಾವುದೇ ಆರೋಗ್ಯ ಅಧಿಕಾರಿಗಳು ನಮ್ಮ ಮನೆಗೆ ಬಂದಿಲ್ಲ. ಜೊತೆಗೆ ನನಗೆ ಸೆಲ್ಪ್ ಐಸೋಲೇಷನ್ ಮಾಡುವಂತೆ ಸೂಚಿಸಿಲ್ಲ.
ಕನ್ನಡ, ತಮಿಳು, ತೆಲುಗು, ಹಿಂದಿ ಅಂತ ವಿವಿಧ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ಧಾರೆ. ಹಾಗಾಗಿ, ಅವರು ಬೇರೆ ಬೇರೆ ಊರುಗಳಿಗೆ ವಿಮಾನ ಪ್ರಯಾಣ ಮಾಡಬೇಕಾಗುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಶ್ರದ್ಧಾ ಬಗ್ಗೆ ವದಂತಿ ಹಬ್ಬಿಸಲಾಗಿದೆ. 'ಕೊರೊನಾ ಪೀಡಿತರು ಇದ್ದ ವಿಮಾನದಲ್ಲಿ ಶ್ರದ್ಧಾ ಪ್ರಯಾಣ ಮಾಡಿದ್ದರಿಂದ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ, ಅವರನ್ನು ಹೋಮ್ ಕ್ವಾರಂಟೈನ್ ಮಾಡಿದ್ದಾರೆ' ಎಂದೆಲ್ಲ ಸುದ್ದಿ ಹಬ್ಬಿಸಲಾಗಿದೆ. ಆದರೆ, ಇದಕ್ಕೆ ಖಡಕ್ ಆಗಿ ಉತ್ತರ ನೀಡಿದ್ದಾರೆ ಶ್ರದ್ಧಾ ಶ್ರೀನಾಥ್.
ಅಧಿಕಾರಿಗಳು ಸೂಚಿಸಿಲ್ಲ ಎಂದಮಾತ್ರಕ್ಕೆ ಅವರೇನು ಸುಮ್ಮನಾಗಿಲ್ಲ. ತಮಗೆ ತಾವೇ ಐಸೋಲೇಷನ್ ಮಾಡಿಕೊಂಡಿದ್ದಾರೆ. 'ನನ್ನ ಸಂಬಂಧಿ ವೈದ್ಯರೊಬ್ಬರ ಸಲಹೆ ಮೇರೆಗೆ ನಾನು ಸ್ವಯಂ ಐಸೋಲೇಟ್ ಆಗಿದ್ದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಈ ರೀತಿ ಮಾಡಿದೆ. ದೇಶ-ವಿದೇಶ ಪ್ರಯಾಣ ಮಾಡುವ ಯಾರೇ ಆಗಲಿ, ಈ ರೀತಿ ಮಾಡುವುದು ಸೂಕ್ತ. ಇದು ಪ್ರತಿಯೊಬ್ಬ ಜವಾಬ್ದಾರಿ ಆಗಿದೆ. ಮಾ. 29ಕ್ಕೆ ನನ್ನ ಐಸೋಲೇಷನ್ ಅವಧಿ ಮುಕ್ತಾಯಗೊಂಡಿದ್ದು, ಅಡುಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ಎಲ್ಲರೂ ಹುಷಾರಾಗಿರಿ. ವೈರಸ್ ಮತ್ತು ತಪ್ಪು ಮಾಹಿತಿಯನ್ನು ಹರಡದಿರಿ. ಎರಡೂ ಕೂಡ ಅಪಾಯಕಾರಿ' ಎಂದಿದ್ದಾರೆ ಶ್ರದ್ಧಾ ಶ್ರೀನಾಥ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


