ಹಿರೋಯಿನ್ ಇಲ್ಲದ 'ಆ ದೃಶ್ಯ'ದಲ್ಲಿ ರವಿಚಂದ್ರನ್ ಅಸಾಮಾನ್ಯ ಪಾತ್ರ- ನಿರ್ದೇಶಕ ಶಿವ ಗಣೇಶ್
ನಿಗೂಢ `ಕೊಲೆಯ ಸುತ್ತ ಸಾಗುವ ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.

ಬೆಂಗಳೂರು: ನಿಗೂಢ ಕೊಲೆಯ ಸುತ್ತ ಸಾಗುವ ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.
ಆ ದೃಶ್ಯ ಈ ವಾರ ತೆರೆಗೆ ಅಪ್ಪಳಿಸಲಿದ್ದು, ಇದೇ ಮೊದಲ ಬಾರಿಗೆ ರವಿಚಂದ್ರನ್ ಗೆ ಜೋಡಿಯಿಲ್ಲ. ಚಿತ್ರದಲ್ಲಿ ಯಾವುದೇ ಗೀತೆಗಳಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ರವಿಚಂದ್ರನ್ ಸಿನಿಮಾಗಳೆಂದರೆ ಅಲ್ಲಿ ಹಿರೋಹಿನ್ ಹಾಗೂ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಆದರೆ, ಈ ಸಿನಿಮಾ ವಿಭಿನ್ನವಾಗಿದ್ದು, ಅಲ್ಲಿ ಹಿರೋಹಿನ್, ಹಾಡುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಇಲ್ಲಿ ರವಿಚಂದ್ರನ್ ಅವರ ಮತ್ತೊಂದು ಮುಖ ಅನಾವರಣಗೊಳ್ಳಲಿದೆ.
ಈ ಬಗ್ಗೆ ಚರ್ಚಿಸಿದಾಗ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೋ ಎಂಬ ಬಗ್ಗೆ ರವಿಚಂದ್ರನ್ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಶೂಟಿಂಗ್ ಆರಂಭಿಸಿದಾಗ ಇದೊಂದು ಒಳ್ಳೇಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಯಸ್ಸಿನಲ್ಲಿ ಕ್ರೇಜಿಸ್ಟಾರ್ ಸರಿಯಾದ ಕಥೆ ಆಯ್ದುಕೊಂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.
ದೃಶ್ಯ ರೀತಿಯಲ್ಲಿ ಸಿನಿಮಾ ಕಥೆ ಇದೆ . ಆದರೆ , ದೃಶ್ಯದಲ್ಲಿ ಪೊಲೀಸ್ ಅಧಿಕಾರಿಗಳು ರವಿಚಂದ್ರನ್ ಅವರನ್ನು ತನಿಖೆಗೊಳಪಡಿಸುತ್ತಾರೆ. ಆದರೆ, ಆ ದೃಶ್ಯದಲ್ಲಿ ಅವರೇ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುತ್ತಾರೆ ಎಂದು ಅವರು ವಿವರಿಸಿದರು.
ರವಿಚಂದ್ರನ್ ಅವರ ಕೆಲಸದ ಶೈಲಿ ಬಗ್ಗೆ ಕೇಳಿದ್ದೆ. ನಂತರ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಲಾಯಿತು. ಕೆಲ ಶಾಟ್ ಗಳಲ್ಲಿ ರವಿ ಸರ್ ಸಹಾಯ ಮಾಡಿದ್ದಾರೆ. ಕ್ಯಾಮರಾ ಕೂಡಾ ಆಪರೇಟ್ ಮಾಡಿದ್ದಾರೆ. ಅವರಿಂದ ಸೂಕ್ತ ಸಲಹೆಗಳು ಬರುತ್ತಿದ್ದವು. ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು ಎಂದು ಶಿವಗಣೇಶ್ ತಿಳಿಸಿದರು.
ಕೆ. ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಅಚ್ಯುತ್ ಕುಮಾರ್, ಚೈತ್ರಾ ಅಚಾರ್, ನಿಸಾರ್ಗ ಮತ್ತಿತರರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


