ನಿರ್ದೇಶಕರು ನನ್ನ ಕ್ಲೀವೇಜ್, ತೊಡೆ ನೋಡಲು ಬಯಸುತ್ತಿದ್ದರು: ನಟಿ ಸುರ್ವೀನ್ ಚಾವ್ಲಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನ್‍ವಾಲಾ' ಹಾಗೂ ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ಮತ್ತೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು,..

ಮುಂಬೈ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನ್‍ವಾಲಾ' ಹಾಗೂ ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ಮತ್ತೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ನಿರ್ದೇಶಕರು ನನ್ನ ಕ್ಲೀವೇಜ್ ಮತ್ತು ತೊಡೆ ನೋಡಲು ಬಯಸುತ್ತಿದ್ದರು ಎಂದು ಹೇಳಿದ್ದಾರೆ.
'ಕಹಿನ್ ಟು ಹೋಗಾ' ಟಿವಿ ಕಾರ್ಯಕ್ರಮದ ಮೂಲಕ ನಟನಾ ವೃತ್ತಿ ಆರಂಭಿಸಿದ ಸುರ್ವೀನ್ ಚಾವ್ಲಾ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಕನ್ನಡ, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಹೇಟ್ ಸ್ಟೋರಿ 2 ಚಿತ್ರದ ನಾಯಕಿಗೆ ಒಟ್ಟು ಐದು ಬಾರಿ ಕ್ಯಾಸ್ಟಿಂಗ್ ಕೌಚ್ ಅನುಭವವಾಗಿದ್ದು, ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಮೂರು ಬಾರಿ ಹಾಗೂ ಬಾಲಿವುಡ್ ನಲ್ಲಿ ಎರಡು ಬಾರಿ ಅಂತಹ ಕೆಟ್ಟ ಅನುಭವವಾಗಿದೆ. ಆದರೆ ನಾನದನ್ನು ನಿರಾಕರಿಸಿದೆ ಎಂದು ನಟಿ ಹೇಳಿದ್ದಾರೆ.
ಒಬ್ಬ ನಿರ್ದೇಶಕ ನನ್ನ ಕ್ಲೀವೇಜ್ ಹೇಗೆ ಕಾಣುತ್ತಿದೆ ಎಂದು ನೋಡಲು ಬಯಸಿದರೆ ಮತ್ತೊಬ್ಬ ನಿರ್ದೇಶಕ ನನ್ನ ತೊಡೆ ಹೇಗೆ ಕಾಣಿಸುತ್ತಿವೆ ಎಂದು ನೋಡಲು ಬಯಸುತ್ತಿದ್ದರು ಎಂದು ಸುರ್ವೀನ್ ಚಾವ್ಲಾ ಅವರು ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದು ಬಾರಿ ನಾನು ಆಡಿಷನ್ ಗೆ ಹೋಗಿದ್ದಾಗ, ವ್ಯಕ್ತಿಯೊಬ್ಬರು ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ದರು. ಆದರೆ ನನ್ನ ತೂಕ ಕೇವಲ 56 ಕೆಜಿ ಇತ್ತು. ಆ ವ್ಯಕ್ತಿಗೆ ಕನ್ನಡಕದ ಅಗತ್ಯ ಇತ್ತು ಅಂತ ಕಾಣಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಸುರ್ವೀನ್ ಚಾವ್ಲಾ ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ಆದರೆ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಮಾತ್ರ ಅದನ್ನು ಎದುರಿಸಿದ್ದೇನೆ ಎಂದಿದ್ದರು. ಈಗ ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡರಲ್ಲೂ ಕಾಸ್ಟಿಂಗ್ ಕೌಚ್ ಇದೆ ಎನ್ನುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


