20 ವರ್ಷಗಳ ನಂತರ ಮತ್ತೆ ಬರ್ತಿದ್ದಾನೆ 'ನಾನು'!
1999ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ನಾಯಕಿಯರಾಗಿ ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಟಿಸಿದ್ದರು. ಉಪೇಂದ್ರ ನಿಭಾಯಿಸಿದ್ದ ‘ನಾನು’ ಎಂಬ ಪಾತ್ರ ಸಿಕ್ಕಾಪಟ್ಟೆ ಡಿಫರೆಂಟ್ ಆಗಿತ್ತು.

ನಟ ಉಪೇಂದ್ರ ವೃತ್ತಿಜೀವನದಲ್ಲಿ ಬಹು ದೊಡ್ಡ ತಿರುವು ನೀಡಿದ ಸಿನಿಮಾಗಳಲ್ಲಿ ‘ಉಪೇಂದ್ರ’ ಕೂಡ ಪ್ರಮುಖವಾದದ್ದು.
1999ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ನಾಯಕಿಯರಾಗಿ ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಟಿಸಿದ್ದರು. ಉಪೇಂದ್ರ ನಿಭಾಯಿಸಿದ್ದ ‘ನಾನು’ ಎಂಬ ಪಾತ್ರ ಸಿಕ್ಕಾಪಟ್ಟೆ ಡಿಫರೆಂಟ್ ಆಗಿತ್ತು
ಉಪೇಂದ್ರ ಚಿತ್ರಕ್ಕಾಗಿ ಗುರುಕಿರಣ್ ಸಂಗೀತ ಸಂಯೋಜಿಸಿದ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್. ಬರೋಬ್ಬರಿ 20 ವರ್ಷಗಳ ಬಳಿಕ ಉಪೇಂದ್ರ ಸಿನಿಮಾ ಮತ್ತೆ ರಿ ರಿಲೀಸ್ ಆಗುತ್ತಿದೆ. ಉಪೇಂದ್ರ ಚಿತ್ರವನ್ನು ಮತ್ತೆ ತೆರೆಗೆ ತರಲು ನಿರ್ವಪಕ ಶಿಲ್ಪಾ ಶ್ರೀನಿವಾಸ್ ಯೋಜನೆ ರೂಪಿಸುತ್ತಿದ್ದಾರೆ.
20 ವರ್ಷಗಳ ಹಿಂದೆ ಮಲ್ಟಿಪ್ಲೆಕ್ಸ್ಗಳು ಇರಲಿಲ್ಲ. ಈಗ ಸಿನಿಮಾ ಪರದೆಗಳ ಸಂಖ್ಯೆ ಹೆಚ್ಚಿರುವುದರಿಂದ ಇಂಥ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಚಿತ್ರಗಳು ರೀ-ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಹಾಗಾಗಿ ‘ಉಪೇಂದ್ರ’ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು’ ಎನ್ನುತ್ತಾರೆ ನಿರ್ವಪಕರು. ಈ ಬಗ್ಗೆ ಉಪೇಂದ್ರ ಜತೆ ಮಾತುಕತೆ ಮಾಡುವುದು ಬಾಕಿ ಇದೆಯಂತೆ.
‘ಸ್ವತಃ ಉಪೇಂದ್ರ ಈ ಸಿನಿಮಾದ ನಿರ್ದೇಶಕರಾಗಿರುವುದರಿಂದ ಮರು ಬಿಡುಗಡೆ ಬಗ್ಗೆ ಅವರ ಅಭಿಪ್ರಾಯ ತುಂಬ ಮುಖ್ಯವಾಗುತ್ತದೆ. ಡಿಫರೆಂಟ್ ಕಾನ್ಸೆಪ್ಟ್ ಇಟ್ಟುಕೊಂಡು ಪ್ರಚಾರ ಮಾಡಬೇಕಿದೆ’ ಎನ್ನುವ ಶಿಲ್ಪಾ ಶ್ರೀನಿವಾಸ್ ಬಿಡುಗಡೆ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


