ಸಿನಿಮಾ ಸುದ್ದಿ

ಪೈರಸಿ ತಡೆಗೆ ಮುಂಜಾಗ್ರತೆ ವಹಿಸಿದ ಗೀತಾ ಚಿತ್ರ ತಂಡ!

ಹೀಗಾಗಿ ಸೆ.27ರಂದು ಗಣೇಶ್ ನಾಯಕತ್ವದ ‘ಗೀತಾ’ ಸಿನಿಮಾ ರಾಜ್ಯಾದ್ಯಂತ ಅಂದಾಜು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಪೈರಸಿ ಹಾವಳಿಯಿಂದ ಚಿತ್ರವನ್ನು ಉಳಿಸಲು ನಿರ್ವಪಕ ಸೈಯದ್ ಸಲಾಂ ಈಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪೈರಸಿ ತಡೆಗೆ ಮುಂಜಾಗ್ರತೆ ವಹಿಸಿದ ಗೀತಾ ಚಿತ್ರ ತಂಡ!
ಗೀತಾ ಸಿನಿಮಾ ಪೋಸ್ಟರ್
Published On :

ಇತ್ತೀಚೆಗೆ ತೆರೆಕಂಡ ‘ಪೈಲ್ವಾನ್’ ಸಿನಿಮಾ ಪೈರಸಿಗೆ ತುತ್ತಾದ ಬಳಿಕ ಮುಂಬರುವ ಚಿತ್ರಗಳು ತೀವ್ರ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಹೀಗಾಗಿ ಸೆ.27ರಂದು ಗಣೇಶ್ ನಾಯಕತ್ವದ ‘ಗೀತಾ’ ಸಿನಿಮಾ ರಾಜ್ಯಾದ್ಯಂತ ಅಂದಾಜು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಪೈರಸಿ ಹಾವಳಿಯಿಂದ ಚಿತ್ರವನ್ನು ಉಳಿಸಲು ನಿರ್ವಪಕ ಸೈಯದ್ ಸಲಾಂ ಈಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪೈರಸಿ ನಿಗ್ರಹಕ್ಕಾಗಿ ಒಂದು ಖಾಸಗಿ ಕಂಪನಿ ಜತೆ ಅವರು ಕೈ ಜೋಡಿಸಿದ್ದಾರೆ. ಚಿತ್ರದ ನಕಲು ಪ್ರತಿಗಳನ್ನು ಇಂಟರ್​ನೆಟ್​ನಲ್ಲಿ ಯಾರೇ ಅಪ್​ಲೋಡ್ ಮಾಡಿದರೂ ಅದನ್ನು ಕೂಡಲೇ ಡಿಲೀಟ್ ಮಾಡಿಸುವ ಹೊಣೆಯನ್ನು ಈ ಕಂಪನಿ ಹೊತ್ತುಕೊಂಡಿದೆಯಂತೆ. ಮಾತ್ರವಲ್ಲದೆ, ಮುಂಚಿತವಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಮತ್ತು ಮನವಿಯನ್ನೂ ಸಲ್ಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.