'ವೀರಂ' ಚಿತ್ರದಲ್ಲಿ ಸಾಹಸ ಸಿಂಹನ ಅಭಿಮಾನಿ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್
ಖಾದರ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲುಕ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಧವಾರ ಬಿಡುಗಡೆಗೊಳಿಸಿದ್ದಾರೆ.ಡಾ. ವಿಷ್ಣುವರ್ಧನ್ ಜನ್ಮದಿನದಂದು ಚಿತ್ರತಂಡ ಇದರ ಕುರಿತು ಅಧಿಕೃತ ಪ್ರಕಟಣೆ ನೀಡಲಿದೆ.

ಖಾದರ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲುಕ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಧವಾರ ಬಿಡುಗಡೆಗೊಳಿಸಿದ್ದಾರೆ.ಡಾ. ವಿಷ್ಣುವರ್ಧನ್ ಜನ್ಮದಿನದಂದು ಚಿತ್ರತಂಡ ಇದರ ಕುರಿತು ಅಧಿಕೃತ ಪ್ರಕಟಣೆ ನೀಡಲಿದೆ.
ಇನ್ನು ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಆಗಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ವಿಷ್ಣು ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳುತಿದ್ದಾರೆ. ಅಲ್ಲದೆ ನಿರ್ದೇಶಕ ಖಾದರ್ ತಾವು ಸ್ವತಃ ಸಾಹಸ ಸಿಂಹ ಅಭಿಮಾನಿ ಎಂಬುದು ಗಮನಾರ್ಹ.
"ವೀರಂ" ಎಂಬ ಹೆಸರನ್ನು ಚಿತ್ರದ ಶೀರ್ಷಿಕೆಯಾಗಿ ಆಯ್ಕೆ ಮಾಡಿದ್ದು ಚಿತ್ರವನ್ನು ಈ ಮುನ್ನ ಡಾಟರ್ ಆಫ್ ಪಾರ್ವತಮ್ಮ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ದಿಶಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಮಾಡುತ್ತಿದೆ.ಚಿತ್ರದ ಕುರಿತ ಹೆಚ್ಚಿನ ಮಾಹಿತಿ ಹಾಗೂ ಪ್ರಜ್ವಲ್ ಪಾತ್ರದ ವಿವರ ನಿರ್ದೇಶಕರು ಮುಂಬರುವ ಕಾರ್ಯಕ್ರಮದಲ್ಲಿಬಹಿರಂಗಪಡಿಸಲಿದ್ದಾರೆ.

ಇನ್ನು ನಟ ಪ್ರಜ್ವಲ್ ಇದೀಗ ನರಸಿಂಹ ನಿರ್ದೇಶನದ "ಇನ್ಸ್ ಪೆಕ್ಟರ್ ವಿಕ್ರಂ" ಹಾಗೂ ಲಕ್ಕಿ ಶಂಕರ್ ನಿರ್ದೇಶನದ "ಅರ್ಜುನ್ ಗೌಡ" ಚಿತ್ರದ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.ಈಗ ಅವರು ಜದೇಶ್ ಕುಮಾರ್ ಅವರ "ಜಂಟಲ್ ಮ್ಯಾನ್" ಹಾಗೂ ರಾಮ್ ನಾರಾಯಣ್ ಅವರ ಹೊಸ ಯೋಜನೆಯೊಂದರಲ್ಲಿ ಬ್ಯುಸಿ ಇದ್ದಾರೆ.ಅಲ್ಲದೆ ನಟ ಮುಂಬರುವ ದಿನಗಳಲ್ಲಿ ನಿರ್ದೇಶಕ ಪಿಸಿ ಶಂಕರ್ ಅವರ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರ ದಕ್ಷಿಣ ಭಾರತೀಯ ಭಾಷೆಗಲಲ್ಲಿ ತಯಾರಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


