ಸಿನಿಮಾ ಸುದ್ದಿ

ತ್ರಿವಿಕ್ರಮ ಚಿತ್ರದ ಮೊದಲ ಹಾಡಿಗೆ ರಾಜು ಸುಂದರಂ ನೃತ್ಯ ಸಂಯೋಜನೆ!

ಕೇಜ್ರಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ತ್ರಿವಿಕ್ರಮ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಚಿತ್ರದ ಮೊದಲ ಹಾಡಿಗೆ ಖ್ಯಾತ ನೃತ್ಯ ಸಂಯೋಜನೆಗಾರ ರಾಜು ಸುಂದರಂ ಅವರು ಸಂಯೋಜನೆ ಮಾಡುತ್ತಿದ್ದಾರೆ.

ತ್ರಿವಿಕ್ರಮ ಚಿತ್ರದ ಮೊದಲ ಹಾಡಿಗೆ ರಾಜು ಸುಂದರಂ ನೃತ್ಯ ಸಂಯೋಜನೆ!
ವಿಕ್ರಮ್-ರಾಜು ಸುಂದರಂ
Published On :

ಕೇಜ್ರಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ತ್ರಿವಿಕ್ರಮ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಚಿತ್ರದ ಮೊದಲ ಹಾಡಿಗೆ ಖ್ಯಾತ ನೃತ್ಯ ಸಂಯೋಜನೆಗಾರ ರಾಜು ಸುಂದರಂ ಅವರು ಸಂಯೋಜನೆ ಮಾಡುತ್ತಿದ್ದಾರೆ.

ತಾಯಿ ಮತ್ತು ಮಗ ಭಾಂದವ್ಯ ಸಾರುವ ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿಗಾಗಿಯೇ 20 ಲಕ್ಷದಲ್ಲಿ ಅದ್ಧೂರಿ ಸೆಟ್ ಅನ್ನು ಹಾಕಲಾಗಿದೆ. ನಾಲ್ಕು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ.

ವಿಕ್ರಮನಿಗೆ ತಾಯಿಯಾಗಿ ತುಳಸಿ ಅಭಿನಯಿಸಿದ್ದು ಚಿಕ್ಕಣ್ಣ ಕಾಮಿಡಿ ಝಲಕ್ ಇರಲಿದೆ. ಈ ಚಿತ್ರದ ಮೂಲಕ ಆಕಾಂಕ್ಷ ಶರ್ಮಾ ಸಹ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವನ್ನು ಸಹನ ಮೂರ್ತಿ ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.