ಸಿನಿಮಾ ಸುದ್ದಿ

ಬಾಲಿವುಡ್ ನಟ ಶಾಹಿದ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿ?

ವಿಜಯ ದೇವರಕೊಂಡ ಜೊತೆ ನಟಿಸಿದ್ದ ಡಿಯರ್ ಕಾಮ್ರೆಡ್ ಚಿತ್ರ ಅಷ್ಟೇನು ಸದ್ದು ಮಾಡಿಲ್ಲ. ಆದರೂ ನಟಿ ರಶ್ಮಿಕಾ ಮಂದಣ್ಣ ಮಾತ್ರ ಬಾಲಿವುಡ್ ಗೆ ಹಾರುತ್ತಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿ?
ಶಾಹಿದ್ ಕಪೂರ್-ರಶ್ಮಿಕಾ ಮಂದಣ್ಣ
Published On :

ಮುಂಬೈ: ವಿಜಯ ದೇವರಕೊಂಡ ಜೊತೆ ನಟಿಸಿದ್ದ ಡಿಯರ್ ಕಾಮ್ರೆಡ್ ಚಿತ್ರ ಅಷ್ಟೇನು ಸದ್ದು ಮಾಡಿಲ್ಲ. ಆದರೂ ನಟಿ ರಶ್ಮಿಕಾ ಮಂದಣ್ಣ ಮಾತ್ರ ಬಾಲಿವುಡ್ ಗೆ ಹಾರುತ್ತಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಕೇಳಿಬರುತ್ತಿದೆ. ತೆಲುಗಿನಲ್ಲಿ ನಾನು ನಟಿಸಿದ್ದ ಜೆರ್ಸಿ ಚಿತ್ರದ ಹಿಂದಿ ರಿಮೇಕ್ ನಲ್ಲಿ ಶಾಹಿದ್ ಕಪೂರ್ ಅಭಿನಯಿಸಲಿದ್ದಾರಂತೆ.

ಇನ್ನು ಈ ಚಿತ್ರಕ್ಕೆ ರಶ್ಮಿಕಾಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ . ಅದಾಗಲೇ ಚಿತ್ರತಂಡ ರಶ್ಮಿಕಾ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಈ ಚಿತ್ರದಲ್ಲಿ ಅಭಿನಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರಂತೆ. ಆದರೆ ಅಧಿಕೃತವಾಗಿ ಎಲ್ಲೂ ಮಾಹಿತಿ ಪ್ರಕಟವಾಗಿಲ್ಲ.

ಕನ್ನಡ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ನಂತರ ಚಲೋ, ಗೀತಾ ಗೋವಿದಂ. ಚಮಕ್ ಚಿತ್ರದಲ್ಲಿ ಅಭಿನಯಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.