ಸಿನಿಮಾ ಸುದ್ದಿ

ಪರಿಮಳ ಲಾಡ್ಜ್ ಟೀಸರ್ ನೋಡಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಗರಂ!

ಸಖತ್ ಡಬಲ್ ಮಿನಿಂಗ್ ತುಂಬಿರುವ ಪರಿಮಳ ಲಾಡ್ಜ್ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದೆ. ಇನ್ನು ಚಿತ್ರದಲ್ಲಿನ ಡಬಲ್ ಮಿನಿಂಗ್ ಕುರಿತಂತೆ ಗರಂ ಆಗಿರುವ ಹಿರಿಯ ಪರ್ತಕರ್ತ ರವಿ ಬೆಳೆಗೆರೆ ಅವರು ಚಿತ್ರಕ್ಕೆ ಬೆದರಿಕೆ ಹಾಕಿದ್ದಾರೆ.

ಪರಿಮಳ ಲಾಡ್ಜ್ ಟೀಸರ್ ನೋಡಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಗರಂ!
ರವಿ ಬೆಳೆಗೆರೆ
Published On :

ಬೆಂಗಳೂರು: ಸಖತ್ ಡಬಲ್ ಮಿನಿಂಗ್ ತುಂಬಿರುವ ಪರಿಮಳ ಲಾಡ್ಜ್ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದೆ. ಇನ್ನು ಚಿತ್ರದಲ್ಲಿನ ಡಬಲ್ ಮಿನಿಂಗ್ ಕುರಿತಂತೆ ಗರಂ ಆಗಿರುವ ಹಿರಿಯ ಪರ್ತಕರ್ತ ರವಿ ಬೆಳೆಗೆರೆ ಅವರು ಚಿತ್ರಕ್ಕೆ ಬೆದರಿಕೆ ಹಾಕಿದ್ದಾರೆ. 

ಕೂಡಲೇ ಟೀಸರ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಒಂದು ವೇಳೆ ಚಿತ್ರ ಬಿಡುಗಡೆಯಾದರೆ ಚಿತ್ರತಂಡ ಮೇಲೆ ಕೇಸ್ ಹಾಕಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ರವಿ ಬೆಳೆಗೆರೆ ಹೇಳಿದ್ದಾರೆ. 

ವಿಡಿಯೋವೊಂದನ್ನು ಮಾಡಿ ಯೂಟ್ಯೂಬ್ ಅಪ್ಲೋಡ್ ಮಾಡಿರುವ ರವಿ ಬೆಳೆಗೆರೆ ಅವರು ನಾನು ಯಾರಿಗೂ ಶತ್ರುವಲ್ಲ. ನನಗೆ ಚಿತ್ರರಂಗ ಪರಿಚಿತ. ನಾನು ಅಣ್ಣಾವ್ರ ಅಭಿಮಾನಿ. ವಿಷ್ಣುವರ್ಧನ್ ನನ್ನ ಪರ್ನಲ್ ಫ್ರೆಂಡ್. ಅಂಬರೀಶ್ ನಾನು ಏಕವಚನದ ಗೆಳೆಯ. ಇಂತಹ ದಿಗ್ಗಜರು ಇದ್ದಂತಹ ಚಿತ್ರರಂಗದಲ್ಲಿ ಹೊಲಸು ಮಾತು. ಡಬಲ್ ಮಿನಿಂಗ್ ಅಲ್ಲ. ಇದು ತ್ರಿಬಲ್ ಮಿನಿಂಗ್ ಡೈಲಾಗ್ ಅನ್ನು ಪರಿಮಳ ಲಾಡ್ಜ್ ಟೀಸರ್ ನಲ್ಲಿ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.