‘ಲುಂಗಿ’ ಅದ್ಭುತವಾಗಿದೆ- ಕನ್ನಡದ ವಿವಿಧ ಸೊಗಡಿನ ಚಿತ್ರ ನಿರ್ಮಾಣವಾಗಲಿ ಅಂದ್ರು ಸಿಂಪಲ್ ಸ್ಟಾರ್ ರಕ್ಷಿತ್
ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಕುಂದಾಪುರ ಕನ್ನಡದ ಸೇರಿದಂತೆ ವೈವಿಧ್ಯಮಯ ಭಾಷಾಸಿರಿ ಹೊಂದಿರುವ ರಾಜ್ಯದ ವಿವಿಧ ಭಾಗಗಳ ಜನರು ಸಿನಿಮಾ ಮಾಡುವ ಮೂಲಕ ಚಂದನವನದ ಸೊಬಗನ್ನು ಹೆಚ್ಚಿಸಬೇಕು ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಲಹೆ ನೀಡಿದ್ದಾರೆ

ಬೆಂಗಳೂರು: ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಕುಂದಾಪುರ ಕನ್ನಡದ ಸೇರಿದಂತೆ ವೈವಿಧ್ಯಮಯ ಭಾಷಾಸಿರಿ ಹೊಂದಿರುವ ರಾಜ್ಯದ ವಿವಿಧ ಭಾಗಗಳ ಜನರು ಸಿನಿಮಾ ಮಾಡುವ ಮೂಲಕ ಚಂದನವನದ ಸೊಬಗನ್ನು ಹೆಚ್ಚಿಸಬೇಕು ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಲಹೆ ನೀಡಿದ್ದಾರೆ
‘ಲುಂಗಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ರಕ್ಷಿತ್, ಇತ್ತೀಚಿನ ವರ್ಷಗಳಲ್ಲಿ ಚಿತ್ರೋದ್ಯಮ ಬೆಂಗಳೂರಿಗಷ್ಟೆ ಸೀಮಿತವಾಗಿಲ್ಲ ಹೀಗಾಗಿ ವಿವಿಧ ಸೊಗಡಿನ ಕನ್ನಡದಲ್ಲಿ ಸಿನಿಮಾಗಳು ನಿರ್ಮಾಣವಾಗಬೇಕು ಈಗಾಗಲೇ ಇಂತಹ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ ಎಂದರು
“ಲುಂಗಿ ಚಿತ್ರದ ಟ್ರೇಲರ್ ಮಾತ್ರವಲ್ಲದೆ ನಾಲ್ಕೈದು ತುಣುಕುಗಳನ್ನೂ ವೀಕ್ಷಿಸಿದ್ದೇನೆ ಪ್ರಣವ್ ಸಹಜವಾಗಿ ಅಭಿನಯಿಸಿದ್ದಾರೆ ಚಿತ್ರ ಶತದಿನೋತ್ಸವ ಆಚರಿಸುವುದು ಖಚಿತ” ಎಂದು ಚಿತ್ರತಂಡಕ್ಕೆ ರಕ್ಷಿತ್ ಶೆಟ್ಟಿ ಶುಭ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


