ಭರತ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮನೋರಂಜನ್
ಪ್ರಾರಂಭ ಚಿತ್ರದಲ್ಲಿನ ಹಾಡಿನ ಚಿತ್ರೀಕರಣ ಮುಗಿಸಿರುವ ಮನೋರಂಜನ್, ಇನ್ನೂ ಕೆಲವೇ ದಿನಗಳಲ್ಲಿ ಆ ಚಿತ್ರವನ್ನು ಪೂರ್ಣಗೊಳಿಸಲಿದ್ದಾರೆ . ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಅವರೇ ನಾಯಕರಾಗುತ್ತಿರುವುದು ದೃಢಪಟ್ಟಿದೆ.

ಬೆಂಗಳೂರು: ಪ್ರಾರಂಭ ಚಿತ್ರದಲ್ಲಿನ ಹಾಡಿನ ಚಿತ್ರೀಕರಣ ಮುಗಿಸಿರುವ ಮನೋರಂಜನ್, ಇನ್ನೂ ಕೆಲವೇ ದಿನಗಳಲ್ಲಿ ಆ ಚಿತ್ರವನ್ನು ಪೂರ್ಣಗೊಳಿಸಲಿದ್ದಾರೆ . ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಅವರೇ ನಾಯಕರಾಗುತ್ತಿರುವುದು ದೃಢಪಟ್ಟಿದೆ.
ಅಡಚಣೆಗಾಗಿ ಕ್ಷಮಿಸಿ ಚಿತ್ರದ ನಿರ್ದೇಶಕ ಭರತ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿರುವುದಾಗಿ ಜ್ಯೂನಿಯರ್ ಕ್ರೇಜಿಸ್ಟಾರ್ ತಿಳಿಸಿದ್ದಾರೆ.
ನಿರ್ದೇಶಕರು ಹಾಗೂ ಪ್ರೀ - ಪ್ರೊಢಕ್ಷನ್ ಹಂತದಲ್ಲಿ ಬ್ಯುಸಿಯಾಗಿದ್ದು, ನವೆಂಬರ್ ಮಧ್ಯಭಾಗದಲ್ಲಿ ಮುಹೂರ್ತ ನಡೆಯಲಿದೆ. ಶೀರ್ಷಿಕೆ, ತಾರಾಗಣ ಹಾಗೂ ತಂತ್ರಜ್ಞರ ತಂಡವನ್ನು ಅಂದೇ ತಿಳಿಸಲಾಗುತ್ತದೆ. ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುಂಚಿತವಾಗಿ ಪ್ರಾರಂಭ ಚಿತ್ರದ ಬಿಡುಗಡೆ ಬಗ್ಗೆ ಯೋಚಿಸಲಾಗಿದೆ ಎಂದು ಮನೋರಂಜನ್ ಹೇಳಿದ್ದಾರೆ.
ಪ್ರಾರಂಭ ಚಿತ್ರದಲ್ಲಿ ಎರಡು ಶೆಡ್ ಗಳಲ್ಲಿ ಕಾಣಿಸಿಕೊಂಡಿರುವ ಮನೋರಂಜನ್, ಹಾಡುಗಳು ಸೂಗಸಾಗಿವೆ. ಯುವಕರ ಪ್ರೀತಿಗೆ ಸಂಬಂಧಿಸಿದ ಕಥೆಯಾಧಾರಿತ ಚಿತ್ರವಾಗಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


