ಸಹೋದರಿ ಜೊತೆ ರೇಸ್'ನಲ್ಲಿ ನಾನಿಲ್ಲ: ಅನುಷಾ ರಂಗನಾಥ್
ಸಹೋದರಿ ಆಶಿಕಾ ರಂಗನಾಥ್ ಅವರೊಂದಿಗೆ ಹೋಲಿಕೆ ಓಕೆ. ಆದರೆ, ಸ್ಪರ್ಧೆಗಿಳಿಯುವ ಯಾವುದೇ ಮನಸ್ಸಿಲ್ಲ ಎಂದು ಅನುಷಾ ರಂಗನಾಥ್ ಅವರು ಹೇಳಿದ್ದಾರೆ.

ಸಹೋದರಿ ಆಶಿಕಾ ರಂಗನಾಥ್ ಅವರೊಂದಿಗೆ ಹೋಲಿಕೆ ಓಕೆ. ಆದರೆ, ಸ್ಪರ್ಧೆಗಿಳಿಯುವ ಯಾವುದೇ ಮನಸ್ಸಿಲ್ಲ ಎಂದು ಅನುಷಾ ರಂಗನಾಥ್ ಅವರು ಹೇಳಿದ್ದಾರೆ.
ಕಿರುತೆರೆಯ ಗೋಕುಲದಲ್ಲಿ ಸೀತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಅನುಷಾ ರಂಗನಾಥ್ ಅವರು, ಸೋಡಾಬುಡ್ಡಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಅಂದವಾದ ಚಿತ್ರದಲ್ಲಿ ನಟಿಸಿದ್ದು, ಚಿತ್ರವನ್ನು ಚಲ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಜೈ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಈ ವಾರ ಮರುತೆರೆ ಕಾಣಲು ಸಿದ್ಧವಾಗಿದೆ.
ವಿನಯ್ ರಾಜ್ ಕುಮಾರ್ ಅಭಿನಯದ ಬಾಕ್ಸಿಂಗ್ ಸಿನಿಮಾ 10 ನಲ್ಲಿ ಅನುಷಾ ಅವರು ನಡೆಸುತ್ತಿದ್ದು, ಚಿತ್ರದ ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾರೆ.
ಧಾರಾವಾಹಿಗೆ ಹೋಲಿಕೆ ಮಾಡಿತರೆ, ಸಿನಿಮಾಗಳಲ್ಲಿ ಅಷ್ಟೊಂದು ಗುರ್ತಿಕೆ ಸಿಗುತ್ತಿಲ್ಲ. ನಾನು ಅಂತರ್ಮುಖಿಯಾಗಿದ್ದು, ಇದನ್ನೇ ನಾನು ಇಷ್ಟಪಡುತ್ತಿದ್ದೇನೆ. ಎಲ್ಲರ ಗಮನ ಸೆಳೆಯಬೇಕೆನ್ನುವ ವ್ಯಕ್ತಿ ನಾನಲ್ಲ ಎಂದು ಅನುಷಾ ತಿಳಿಸಿದ್ದಾರೆ.
ಅಂದವಾದ ಚಿತ್ರದಲ್ಲಿ ತಮ್ಮ ಪಾತ್ರದ ಕುರಿತಂತೆ ಮಾತನಾಡಿರುವ ಅನುಷಾ, ಸುಳ್ಳು ಹೇಳುವ ಅಭ್ಯಾಸವಿರುವ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಚಿತ್ರ ಅತ್ಯಂತ ಸುಂದರವಾದ ಲವ್ ಸ್ಟೋರಿ ಹೊಂದಿದೆ. ಚಿತ್ರ ನನ್ನನ್ನು ಪ್ರಪಂಚಕ್ಕೆ ವಿಭಿನ್ನ ರೀತಿಯಲ್ಲಿ ಪರಿಚಯಿಸಲಿದೆ. ಏಲಿಯನ್ಸ್, ಬಾಹ್ಯಾಕಾಶದ ಬಗ್ಗೆ ನಾನು ಚಿಂತಿಸುತ್ತಿರುತ್ತೇನೆ. ಪಾತ್ರದಲ್ಲಿ ಹಾಸ್ಯವೂ ಇದೆ. ಕೆಲವೊಮ್ಮೆ ಸಿಲ್ಲಿ ಎನಿಸುತ್ತದೆ. ಚಿತ್ರದಲ್ಲಿ ನನ್ನ ಸುಳ್ಳು ಪ್ರಮುಖ ಪಾತ್ರವಹಿಸುತ್ತದೆ. ಮಳೆಗಾಲದ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರದ ಚಿತ್ರೀಕರಣಗಳು ನಡೆದಿದೆ. ಚಿತ್ರದ ಒಂದು ಹಾಡು ನಮ್ಮನ್ನು ಅಂಡಮಾನ್'ಗೆ ಕರೆದೊಯ್ಯಲಿದೆ ಎಂದಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಸಹೋದರಿಯಲು ನಟಿಸುತ್ತಿದ್ದು, ಇಬ್ಬರ ನಡುವೆ ಹೋಲಿಕೆಗಳು ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಅನುಷಾ, ಹೋಲಿಕೆ ಸ್ವಾಗತಾರ್ಹ. ಸಹೋದರಿಯ ಹೆಸರು ಹೇಳದೆಯೇ ಯಾರೊಂದಿಗೂ ಯಾವುದೇ ಸಂಭಾಷಣೆಗಳೂ ಪೂರ್ಣಗೊಂಡಿಲ್ಲ. ಅವಳ ಬಗ್ಗೆ ಮಾತನಾಡಲು ನನಗೆ ಸಂತೋಷವಿದೆ. ಸಹೋದರಿಯಂತೆ ನಾನು ಕಾಣುತ್ತೇನೆಂದು ಹೇಳುತ್ತಾರೆ. ರ್ಯಾಂಬೋ2 ನ ಚುಟು ಚುಟು ಗೀತೆಯಲ್ಲಿ ಆಶಿಕಾ ಕಾಣಿಸಿಕೊಂಡ ಬಳಿಕ ಜನಪ್ರಿಯತೆ ಗಳಿಸಿದ್ದಾರೆ. ಇದು ನನಗೂ ಜನಪ್ರಿಯತೆ ತಂದುಕೊಟ್ಟಿದೆ. ನಾವು ಭಿನ್ನರಲ್ಲ. ಚಿತ್ರರಂಗ ಇಬ್ಬರನ್ನೂ ಒಪ್ಪಿಕೊಂಡಿದೆ. ಸಹೋದರಿ ನನಗಿಂತಲೂ ಭಿನ್ನರಾಗಿದ್ದಾರೆ. ಸಹೋದರಿ ಜೊತೆಗಿನ ಸ್ಪರ್ಧೆಯ ರೇಸ್ ನಲ್ಲಿ ನಾನಿಲ್ಲ. ಚಿತ್ರರಂಗಕ್ಕೆ ಬಂದ ವೇಳೆ ಸಹೋದರಿ ಸಾಕಷ್ಟು ಕಠಿಣ ಸಮಯವನ್ನು ಎದುರಿಸಿದ್ದಾರೆ. ಆಶಿಕಾ ಉತ್ತಮ ಪ್ರಾಜೆಕ್ಟ್ ಗಳು ಸಿಗುತ್ತಿವೆ. ಅದಕ್ಕೆ ಆಕೆ ಅರ್ಹಳಾಗಿದ್ದಾಳೆ. ಚಿತ್ರರಂಗದಲ್ಲಿ ನನಗೆ ಸಿಕ್ಕಿರುವ ಜಾಗವನ್ನು ನಾನು ಎನ್'ಜಾಯ್ ಮಾಡುತ್ತಿದ್ದೇನೆಂದಿದ್ದಾರೆ.
ಚಿತ್ರದ ಆಯ್ಕೆ ವಿಚಾರದಲ್ಲಿ ನಾನು ಮತ್ತು ಆಶಿಕಾ ಒಂದೇ ಅಭಿರುಚಿಯನ್ನು ಹೊಂದಿದ್ದೇವೆ. ನನಗೆ ಹೋಲಿಕೆಯಾಗುವಂತಹ ಗ್ಲಾಮರಸ್ ಪಾತ್ರ ನನಗಿನ್ನೂ ಸಿಕ್ಕಿಲ್ಲ. ಅಂತಹ ಪಾತ್ರಗಳಿಗೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡುತ್ತಿಲ್ಲ. ದೀರ್ಘಕಾಲಿಕವಾಗಿ ಪ್ರಸಾರವಾಗುವ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದು ಬೇಜಾರೆನಿಸುತ್ತದೆ. ಮೂರು ಚಿತ್ರಗಳಿಂದ ಪ್ರೇಕ್ಷಕರು ನನ್ನನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಉತ್ತಮ ಅವಕಾಶಗಳಿಗಾಗಿ ನಾನು ಕಾಯುತ್ತಿದ್ದೇನೆ. ಮುಂದಿನ ಚಿತ್ರ ಜನರ ಮನಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


