ಸಿನಿಮಾ ಸುದ್ದಿ

ಶ್ರದ್ಧಾ ಶ್ರೀನಾಥ್ ಬಳಕುವ ಬಳ್ಳಿಯಂತಾಗಿದ್ದೇಗೆ? ನಟಿಯ ಜಿರೋ ಫಿಗರ್ ಫೋಟೋ ವೈರಲ್!

ಯು-ಟರ್ನ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ಚಿತ್ರ ಪ್ರೇಮಿಗಳ ಮನಸು ಗೆದ್ದಿದ್ದರು. ಇಂತಹ ಶ್ರದ್ಧಾ ಶ್ರೀನಾಥ್ ಚಿತ್ರಕ್ಕೆ ಬರುವ ಮುಂಚೆ ತಾವು ಹೇಗಿದ್ದೆ ಎಂಬುದನ್ನು ತೋರಿಸಲು ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿದೆ.

ಶ್ರದ್ಧಾ ಶ್ರೀನಾಥ್ ಬಳಕುವ ಬಳ್ಳಿಯಂತಾಗಿದ್ದೇಗೆ? ನಟಿಯ ಜಿರೋ ಫಿಗರ್ ಫೋಟೋ ವೈರಲ್!
ಶ್ರದ್ಧಾ ಶ್ರೀನಾಥ್
Published On :

ಯು-ಟರ್ನ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ಚಿತ್ರ ಪ್ರೇಮಿಗಳ ಮನಸು ಗೆದ್ದಿದ್ದರು. ಇಂತಹ ಶ್ರದ್ಧಾ ಶ್ರೀನಾಥ್ ಚಿತ್ರಕ್ಕೆ ಬರುವ ಮುಂಚೆ ತಾವು ಹೇಗಿದ್ದೆ ಎಂಬುದನ್ನು ತೋರಿಸಲು ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿದೆ.

ಶ್ರದ್ಧಾ 2014ರಲ್ಲಿ ಬಾಲಿಗೆ ತೆರಳಿದ್ದಾಗ ತೆಗೆಸಿಕೊಂಡಿದ್ದ ಫೋಟೋ ಜೊತೆಗೆ ಇತ್ತೀಚೆಗೆ ತೆಗೆಸಿಕೊಂಡಿರುವ ಫೋಟೋವನ್ನು ಕ್ಲಬ್ ಮಾಡಿ ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ದಡೂತಿಯಂತಿದ್ದ ಶ್ರದ್ಧಾ ಇದೀಗ ತೂಕ ಇಳಿಸಿಕೊಂಡು ಬಳಕುವ ಬಳ್ಳಿಯಂತಾಗಿದ್ದಾರೆ. 

Story image

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಹಠ ತೊಟ್ಟಿದ್ದ ಶ್ರದ್ಧಾ ಇದಕ್ಕಾಗಿ ಸಖತ್ ವರ್ಕೌಟ್ ಮಾಡಿದ್ದಾರೆ. ಜಿಮ್ ನಲ್ಲಿ ಬೆವರಿಳಿಸಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಐದು ವರ್ಷದ ನಂತರದಲ್ಲಿ ಶ್ರದ್ಧಾ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 

ಸದ್ಯ ಶ್ರದ್ಧಾ ನಟಿಸಿರುವ 13 ಚಿತ್ರಗಳು ತೆರೆಕಂಡು ಯಶಸ್ಸು ಗಳಿಸಿವೆ. ಇನ್ನು ಕನ್ನಡದ ಗೋದ್ರಾ, ರುದ್ರಪ್ರಯಾಗ ತಮಿಳಿನ ಇರುಂಬು ತಿರೈ 2 ಮತ್ತು ಮಾರಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.