ನವೆಂಬರ್ ೧ಕ್ಕೆ ಲಗ್ಗೆಯಿಡಲಿದೆ ದಂಡುಪಾಳ್ಯಂ-೪
ಕ್ರೈಂ ಕಥಾಹಂದರದ ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ ಹೂಡಿದ್ದಾರೆ.

ಬೆಂಗಳೂರು: ಕ್ರೈಂ ಕಥಾಹಂದರದ ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ ಹೂಡಿದ್ದಾರೆ.

ಗುರುವಾರ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ನಟ ಧ್ರುವ ಸರ್ಜಾ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಭಾ.ಮಾ ಹರೀಶ್, ಭಾ.ಮಾ ಗಿರೀಶ್ ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಈವರೆಗೂ ದಂಡುಪಾಳ್ಯ ಚಿತ್ರದ ೩ ಭಾಗಗಳು ತೆರೆಕಂಡಿವೆ ನಾಲ್ಕನೆಯ ಭಾಗಕ್ಕೆ ದಂಡುಪಾಳ್ಯಂ ಎಂಬ ಶೀರ್ಷಿಕೆಯಿದೆ.

ಕಾನೂನು ಎಷ್ಟೇ ಬಲವಾಗಿದ್ದರೂ, ಅಪರಾಧಗಳು ನಿಲ್ಲದು ಅಂತೆಯೇ ಅಪರಾಧಿ ಎಷ್ಟೇ ಚತುರಮತಿಯಾಗಿದ್ದರೂ, ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು ಇದನ್ನೇ ದಂಡುಪಾಳ್ಯಂನಲ್ಲಿ ತೋರಿಸಲಾಗಿದೆ. ಜತೆಗೆ ಸಮಾಜದಲ್ಲಿ ಇಂತಹ ದುಷ್ಟರಿದ್ದು, ಒಂಟಿ ಮಹಿಳೆಯರು, ವೃದ್ಧರು ಜಾಗ್ರತೆ ವಹಿಸಬೇಕೆಂಬ ಸಂದೇಶವಿದೆ ಎಂದು ನಿರ್ದೇಶಕ ಕೆ ಟಿ ನಾಯಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


