ಬಿಗ್'ಬಾಸ್-7: 'ದೊಡ್ಮನೆ'ಯಿಂದ ರವಿ ಬೆಳಗೆರೆ ಔಟ್, ಕಾರಣವೇನು ಗೊತ್ತಾ?
ಖಾಸಗಿ ಟಿವಿ ವಾಹಿನಿಯ ರಿಯಾಲಿಟಿ ಶೋ ಬಿಸ್'ಬಾಸ್-7ನೇ ಸೀಸನ್'ನ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ಮೊದಲ ದಿನವೇ 'ದೊಡ್ಮನೆ'ಯಿಂದ ಹೊರ ಬಂದಿದ್ದಾರೆ.

ಬೆಂಗಳೂರು: ಖಾಸಗಿ ಟಿವಿ ವಾಹಿನಿಯ ರಿಯಾಲಿಟಿ ಶೋ ಬಿಸ್'ಬಾಸ್-7ನೇ ಸೀಸನ್'ನ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ಮೊದಲ ದಿನವೇ 'ದೊಡ್ಮನೆ'ಯಿಂದ ಹೊರ ಬಂದಿದ್ದಾರೆ.
ಅನಾರೋಗ್ಯದ ಹಿನ್ನಲೆಯಲ್ಲಿ ರವಿ ಬೆಳಗೆರೆಯವನರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಶೋಗೂ ಮುನ್ನ ರವಿ ಬೆಳಗೆರೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಬಿಸ್ ಬಾಸ್ ಮನೆ ಒಳಗೆ ಹೋಗಿದ್ದರು. ಶೋವೇಳೆ ಮತ್ತೆ ರವಿ ಬೆಳಗೆರೆಯವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಮನೆಯಲ್ಲಿದ್ದ ವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದಾರೆ. ಈ ವೇಳೆ ರವಿ ಬೆಳಗೆರೆಯವರಿಗೆ ಬ್ಲಡ್ ಶುಗರ್ ಹೆಚ್ಚಾಗಿದ್ದು, ಬಿಸ್ ಬಾಸ್ ಕೊಟ್ಟ ಟಾಸ್ಕ್ ಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ರವಿ ಅವರು ಶನಿವಾರದವರೆಗೂ ದೊಡ್ಮನೆಯಲ್ಲಿ ಅತಿಥಿಯಾಗಿ ಮುಂದುವರೆಯಲಿದ್ದಾರೆ.
ಈ ಮೂಲಕ ಸ್ಪರ್ಧಿಯಾಗಿ ಬಿಗ್ ಬಾಸ್ ಪ್ರವೇಶ ಮಾಡಿದ್ದ ಅವರು ಅತಿಥಿಯಾಗಿ ಬದಲಾಗಿದ್ದಾರೆ. ಅಲ್ಲದೆ, ಅವರ ವೋಟಿಂಹ್ ಸಹ ಬಂದ್ ಆಗಲಿದೆ.
ಕಲರ್ಸ್ ಕನ್ನಡ ವಾಹನಿಯಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋನ 7ನೇ ಆವೃತ್ತಿಯಲ್ಲಿ ರವಿ ಬೆಳಗೆರೆ ಸೇರಿ 18 ಮಂದಿ ಸ್ಪರ್ಧಿಗಳು ಮನೆ ಪ್ರವೇಶಿಸಿದ್ದರು. ಇದೀಗ ರವಿ ಬೆಳಗೆರೆ ಅವರು ಮನೆಯಿಂದ ಹೊರಬರಲಿದ್ದು, ಸ್ಪರ್ಧಿಗಳ ಸಂಖ್ಯೆ 17 ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


