ಸಿನಿಮಾ ಸುದ್ದಿ

ಸಿನಿಮಾ ಕ್ಲೈಮ್ಯಾಕ್ಸ್ ವರೆಗೂ ರತ್ನಮಂಜರಿ ಯಾರು ಎಂಬುದು ಅದರ ನಾಯಕಿಯರಿಗೇ ಗೊತ್ತಿರಲಿಲ್ಲ!

ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ “ರತ್ನಮಂಜರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ,...

ಸಿನಿಮಾ ಕ್ಲೈಮ್ಯಾಕ್ಸ್ ವರೆಗೂ ರತ್ನಮಂಜರಿ ಯಾರು ಎಂಬುದು ಅದರ ನಾಯಕಿಯರಿಗೇ ಗೊತ್ತಿರಲಿಲ್ಲ!
ರತ್ನಮಂಜರಿ ಸಿನಿಮಾ ನಾಯಕಿಯರು
Published On :
ಸಿನಿಮಾ ರಿಲೀಸ್ ಆಗುವವರೆಗೂ ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕರು ಸಿನಿಮಾ ರಿಲೀಸ್ ಆಗುವವರೆಗೂ  ಕೆಲವೊಂದು ವಿಷಯಗಳನ್ನು ಸಸ್ಪೆನ್ಸ್ ಆಗಿ ಇಟ್ಟಿರುತ್ತಾರೆ, ಆದರೆ ರತ್ನಮಂಜರಿ ಸಿನಿಮಾ ನಿರ್ದೇಶಕ ಪ್ರಸಿದ್ಧ್  ಕ್ಲೈಮ್ಯಾಕ್ಸ್ ಭಾಗದವರೆಗೂ ನಾಯಕಿಯರ ಹೆಸರನ್ನು ಬಹಿರಂಗಪಡಿಸಿರಲಿಲ್ಲ, 
ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ “ರತ್ನಮಂಜರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಮೇ. 17ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಹೂರ್ತ ಫಿಕ್ಸ್‌ ಮಾಡಿಕೊಂಡಿದೆ. 
ನನ್ನ ಹಿಂದಿನ ನಾಲ್ಕು ಚಿತ್ರಗಳಿಗೆ ಹೋಲಿಸಿದರೆ “ರತ್ನಮಂಜರಿ’ ಸಾಕಷ್ಟು ಅನುಭವಗಳನ್ನು ತಂದುಕೊಟ್ಟಂತಹ ಚಿತ್ರ. ನನ್ನ ಸಿನಿಮಾ ಕೆರೆಯರ್‌ನಲ್ಲಿ “ರತ್ನಮಂಜರಿ’ ಒಂದು ವಂಡರ್‌ಫ‌ುಲ್‌ ಜರ್ನಿ. ಆರಂಭದಲ್ಲಿ ಸಿನಿಮಾ ಯಾವಾಗ ಮುಗಿಯುತ್ತದೆಯೋ, ಅಂತ ಅನಿಸುತ್ತಿತ್ತು. ಆದ್ರೆ ಈಗ ಸಿನಿಮಾ ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅನಿಸುತ್ತಿದೆ.
ದೊಡ್ಡ ಪ್ರಾಜೆಕ್ಟ್‌ನ ಹೇಗೆ ಪ್ಲಾನಿಂಗ್‌ ಮಾಡಬೇಕು, ಅದನ್ನು ಹೇಗೆ ಎಕ್ಸಿಕ್ಯೂಟ್‌ ಮಾಡಬೇಕು. ಸಮಯಕ್ಕೆ ಸರಿಯಾಗಿ ತುಂಬಾ ಪ್ರೊಫೇಷನಲ್‌ ಆಗಿ ಹೇಗೆ ಮುಗಿಸಬೇಕು ಅನ್ನೋದನ್ನ ಈ ಸಿನಿಮಾ ಕಲಿಸಿಕೊಟ್ಟಿದೆ. ಒಟ್ಟಿನಲ್ಲಿ ಸಿನಿಮಾ ಮುಗಿದಿದ್ದೇ ಗೊತ್ತಾಗಲಿಲ್ಲ’ ಎನ್ನುತ್ತಾರೆ ಅಖಿಲಾ ಪ್ರಕಾಶ್‌.
ಇನ್ನು “ರತ್ನ­ಮಂಜರಿ’ ಚಿತ್ರದಲ್ಲಿ ಮೂವರು ನಾಯಕಿ­ಯರಿ­­ದ್ದಾರಂತೆ. ಚಿತ್ರದಲ್ಲಿ ಅಖಿಲಾ, ಫ್ಯಾಷನ್‌ ಡಿಸೈನರ್‌ ಗೌರಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಚಿತ್ರದಲ್ಲಿ ನಿಜವಾದ “ರತ್ನಮಂಜರಿ’ ಯಾರು ಅನ್ನೋದು ಸಸ್ಪೆನ್ಸ್‌.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.