ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರಕ್ಕೆ ಯು/ಎ ಪ್ರಮಾಣಪತ್ರ!
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಂ ಅಭಿನಯದ ಐ ಲವ್ ಯೂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ.

Published On :
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಂ ಅಭಿನಯದ ಐ ಲವ್ ಯೂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ.
ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದು ಸದ್ಯ ಉಪೇಂದ್ರ ವಿದೇಶದಲ್ಲಿ ಪ್ರವಾಸದಲ್ಲಿದ್ದು ಅವರ ಬಂದ ನಂತರ ಚಿತ್ರ ಬಿಡುಗಡೆಯ ದಿನಾಂಕ ನಿಗದಿ ಮಾಡುವ ಯೋಚನೆಯಲ್ಲಿದ್ದಾರೆ. ಚಿತ್ರದ ಮೇ ತಿಂಗಳಲ್ಲೇ ಬಿಡುಗಡೆ ನಿರ್ಧರಿಸಿತ್ತು. ಅಂತೆ ಉಪೇಂದ್ರ ಅವರಿಗೂ ಕರೆ ಮಾಡಿ ಇದೇ ವಾರದಲ್ಲಿ ವಾಪಸಾಗುವಂತೆ ಹೇಳಿತ್ತು. ಇನ್ನು ಬಿಡುಗಡೆಗೂ ಮುನ್ನ ಚಿತ್ರದ ಪ್ರಚಾರ ಕೆಲಸಗಳು ನಡೆಯುವುದರಿಂದ ಉಪೇಂದ್ರ ಅವರ ಉಪಸ್ಥಿತಿ ಮುಖ್ಯವಾಗಿದೆ.
ಐ ಲವ್ ಯೂ ಚಿತ್ರ ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಎರಡು ಭಾಷೆಗಳಲ್ಲೂ ಪ್ರಚಾರ ಮಾಡುವ ತೀರ್ಮಾನವನ್ನು ನಿರ್ದೇಶಕರು ತೆಗೆದುಕೊಂಡಿದ್ದಾರೆ. ಇನ್ನು ಹೆಚ್ಚಿನ ಕೆಲಸಗಳು ಬಾಕಿ ಇರುವುದರಿಂದ ಚಿತ್ರದ ಬಿಡುಗಡೆ ಜೂನ್ ತಿಂಗಳಿಗೆ ಹೋಗುವ ಸಾಧ್ಯತೆ ಇದೆ.
ಚಿತ್ರದಲ್ಲಿ ಉಪೇಂದ್ರಗೆ ರಚಿತಾ ರಾಂ ಮತ್ತು ಸೋನು ಗೌಡ ಸಾಥ್ ನೀಡುತ್ತಿದ್ದಾರೆ. ಕಿರಣ್ ತೋಟಂಬ್ಲೆ ಸಂಗೀತ ಸಂಯೋಜಿಸುತ್ತಿದ್ದು ಹಿನ್ನಲೆ ಸಂಗೀತವನ್ನು ಗುರುಕಿರಣ್ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


