ಬಿಡುಗಡೆಗೂ ಮುನ್ನವೇ ಪ್ರಶಸ್ತಿ ಬಾಚಿಕೊಂಡ 'ಭಿನ್ನ' ಸಿನಿಮಾ
ಆದರ್ಶ್ ಈಶ್ವರಪ್ಪ ಅವರ ಭಿನ್ನ ಸಿನಿಮಾದ ಉತ್ತಮ ಚಿತ್ರಕಥೆಗೆ 9ನೇ ದಾದಾ ಸಾಹೇಬ್ ಫಾಲ್ಕೆ ಎಕ್ಸ್ ಲೆನ್ಸ್ ಪ್ರಶಸ್ತಿ ದೊರಕಿದೆ. ...

Published On :
ಆದರ್ಶ್ ಈಶ್ವರಪ್ಪ ಅವರ ಭಿನ್ನ ಸಿನಿಮಾದ ಉತ್ತಮ ಚಿತ್ರಕಥೆಗೆ 9ನೇ ದಾದಾ ಸಾಹೇಬ್ ಫಾಲ್ಕೆ ಎಕ್ಸ್ ಲೆನ್ಸ್ ಪ್ರಶಸ್ತಿ ದೊರಕಿದೆ.
ಈ ಪ್ರಶಸ್ತಿಗಾಗಿ ಸುಮಾರು 700 ಸಿನಿಮಾಗಳು ಬಂದಿದ್ದವು, ಕೊನೆಯ 7 ದೇಶಗಳ ವಿವಿಧ ಸಿನಿಮಾಗಳ ಪೈಕಿ ಭಿನ್ನ ಆಯ್ಕೆಯಾಗಿದೆ, ಅದರಲ್ಲಿ ಸಣ್ಣಕಥೆಗಳು ಕೂಡ ಸೇರಿಕೊಂಡಿವೆ.
ಈ ಸಿನಿಮಾದಲ್ಲಿ ಯಾವುದೇ ಸ್ಟಾರ್ ಪವರ್ ಇಲ್ಲ, ಬಾಯಿಂದ ಬಾಯಿ ಪ್ರಚಾರ ಪಡೆದುಕೊಂಡು ಜನಪ್ರಿಯವಾಗಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಿನಿಮಾ ಗುರುತಿಸಿಕೊಂಡಿರುವುದು,ನಮಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಪರ್ಪಲ್ ರಾಕ್ ಎಂಟರ್ಟೈನರ್ ಅವರ ಮೊದಲ ಸಿನಿಮಾ ಇದಾಗಿದೆ, ಈ ಸಿನಿಮಾವನ್ನು ನಿರ್ದೇಶಕ ಆದರ್ಶ್ ಪುಟ್ಟಣ್ಣ ಕಣಗಾಲ್ ಅವರಿಗೆ ಸಮರ್ಪಿಸಿದ್ದಾರೆ. ಸೌಮ್ಯಾ ಜಗನ್ನಾಥಮೂರ್ತಿ, ಶಶಾಂಕ್ ಪುರುಷೋತ್ತಮ್, ಮತ್ತು ಸಿದ್ದಾರ್ಥ್ ಮಾಧ್ಯಮಿಕ ಸಿನಿಮಾದಲ್ಲಿ ನಟಿಸಿದ್ದಾರೆ, ಸಿನಿಮಾಗೆ ಜೆಸ್ಸೆ ಕ್ಲಿಂಟನ್ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Adarsh H EshwarappaBhinnaಭಿನ್ನಆದರ್ಶ್ ಈಶ್ವರಪ್ಪ9th Dadasaheb Phalke Excellence Awards9ನೇ ದಾದಾಸಾಹೇಬ್ ಫಾಲ್ಕೆ ಎಕ್ಸ್ ಲೆನ್ಸ್ ಪ್ರಶಸ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


